ಬೆಂಗಳೂರು: ರಾಜ್ಯದಲ್ಲಿ ಇಂದು 201 ಜನರಿಗೆ ಕೊರೋನಾ ಸೋಂಕು ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ ಓರ್ವ ಸಾವನ್ನಪ್ಪಿದ್ದಾನೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿಸಿಆರ್ ಮೂಲಕ 6557 ಹಾಗೂ RAT ಮೂಲಕ 758 ಸೇರಿದಂತೆ 7315 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ ಅಂತ ತಿಳಿಸಿದೆ.
ಇಂದು ಪರೀಕ್ಷೆಗೆ ಒಳಪಟ್ಟಂತ 7315 ಮಂದಿಯಲ್ಲಿ ಬೆಂಗಳೂರು 121, ಬಳ್ಳಾರಿ ಮತ್ತು ಬೆಳಗಾವಿ ತಲಾ 6, ಚಾಮರಾಜನಗರ 08, ಚಿಕ್ಕಬಳ್ಳಾಪುರ ಹಾಗೂ ಚಿಕ್ಕಮಗಳೂರಲ್ಲಿ ತಲಾ 03, ಚಿತ್ರದುರ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 01, ಧಾರವಾಡ ಮತ್ತು ಗದಗ ಜಿಲ್ಲೆಯಲ್ಲಿ 03, ಮೈಸೂರು 10, ತುಮಕೂರು 14 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 201 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂದಿದೆ.
ಇಂದು 257 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಮೈಸೂರಿನಲ್ಲಿ ಓರ್ವ ಸೋಂಕಿಗೆ ಬಲಿಯಾಗಿದ್ದಾನೆ. ಕರ್ನಾಟಕದಲ್ಲಿ ಈಗ 974 ಸಕ್ರೀಯ ಕೋವಿಡ್ ಸೋಂಕಿತರು ಇರುವುದಾಗಿ ಹೇಳಿದೆ.