Mysore
29
clear sky

Social Media

ಮಂಗಳವಾರ, 21 ಜನವರಿ 2025
Light
Dark

WPL: ಮುಂಬೈ ಅಜೇಯ ಓಟಕ್ಕೆ ಯು‍‍ಪಿ ವಾರಿಯರ್ಸ್ ಬ್ರೇಕ್‌

ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸತತ ಐದು ಪಂದ್ಯಗಳ ಗೆಲುವಿನ ಓಟಕ್ಕೆ ಯುಪಿ ವಾರಿಯರ್ಸ್‌ ತಂಡದವರು ತಡೆ ಹಾಕಿದ್ದಾರೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯವನ್ನು ವಾರಿಯರ್ಸ್‌ ತಂಡದವರು ಐದು ವಿಕೆಟ್‌ಗಳಿಂದ ಗೆದ್ದರು.

ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್‌ ಕೌರ್‌ ಬಳಗ ನಿಗದಿತ ಓವರ್‌ಗಳಲ್ಲಿ 127 ರನ್‌ ಗಳಿಸಿತು. ಹೆಯಲಿ ಮ್ಯಾಥ್ಯೂಸ್‌ (35, 30 ಎ., 4X1, 6X3), ಇಸಿ ವಾಂಗ್‌ (32 ರನ್‌, 19 ರನ್‌, 4X1, 6X1) ಮತ್ತು ಹರ್ಮನ್‌ಪ್ರೀತ್‌ (25) ಹೊರತುಪಡಿಸಿ ಉಳಿದ ಯಾರೂ ಎರಡಂಕಿಯ ಮೊತ್ತ ಗಳಿಸಲಿಲ್ಲ. ಗುರಿ ಬೆನ್ನಟ್ಟಿದ ವಾರಿಯರ್ಸ್‌ ಪರ ತಹ್ಲಿ ಮೆಕ್‌ಗ್ರಾ (38) ಮತ್ತು ಗ್ರೇಸ್‌ ಹ್ಯಾರಿಸ್‌ (39) ನಾಲ್ಕನೇ ವಿಕೆಟ್‌ಗೆ 44 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್
ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 127 (ಹೆಯಲಿ ಮ್ಯಾಥ್ಯೂಸ್ 35, ಹರ್ಮನ್‌ಪ್ರೀತ್‌ ಕೌರ್‌ 25, ಇಸಿ ವಾಂಗ್‌ 32, ಸೋಫಿ ಎಕ್ಸೆಲ್‌ಸ್ಟನ್‌ 15ಕ್ಕೆ 3, ರಾಜೇಶ್ವರಿ ಗಾಯಕ ವಾಡ್ 16ಕ್ಕೆ 2, ದೀಪ್ತಿ ಶರ್ಮಾ 35ಕ್ಕೆ 2).

ಯುಪಿ ವಾರಿಯರ್ಸ್‌: 19.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 129 (ತಹ್ಲಿ ಮೆಕ್‌ಗ್ರಾ 38, ಗ್ರೇಸ್‌ ಹ್ಯಾರಿಸ್‌ 39;ಅಮೇಲಿ ಕೆರ್‌ 22ಕ್ಕೆ 2)

ಫಲಿತಾಂಶ: ಯುಪಿಗೆ 5 ವಿಕೆಟ್‌ ಗೆಲುವು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ