ಮುಂಬೈ : 2026 ಮಹಿಳಾ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜು ಮುಕ್ತಾಯಗೊಂಡ ಎರಡು ದಿನಗಳ ಬಳಿಕ ಬಿಸಿಸಿಐ ಇದೀಗ ಈ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ಪಂದ್ಯಾವಳಿಯ ವೇಳಾಪಟ್ಟಿಯ ಆಶ್ಚರ್ಯಕರ ಸಂಗತಿಯೆಂದರೆ ಈ ಲೀಗ್‌ನ ಫೈನಲ್ ಪಂದ್ಯವನ್ನು ವಾರಾಂತ್ಯದಲ್ಲಿ ನಡೆಸುವ ಬದಲು ಅಂದರೆ ಶನಿವಾರ ಅಥವಾ ಭಾನುವಾರದಂದು ನಡೆಸುವ ಬದಲು ವಾರದ ಮಧ್ಯ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಬಿಸಿಸಿಐ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಪಂದ್ಯಾವಳಿಯ ಎಲಿಮಿನೇಟರ್ ಮತ್ತು ಫೈನಲ್ ಪಂದ್ಯವನ್ನು ವಾರದ ದಿನಗಳಲ್ಲಿ ನಡೆಸಲಾಗುತ್ತದೆ. ಎಲಿಮಿನೇಟರ್ ಪಂದ್ಯ ಫೆಬ್ರವರಿ 3 ರ ಮಂಗಳವಾರದಂದು ಮತ್ತು ಫೈನಲ್ ಪಂದ್ಯ ಫೆಬ್ರವರಿ 5 ರ ಗುರುವಾರದಂದು ನಡೆಯಲಿದೆ. ಈ ಬಾರಿ, ಪಂದ್ಯಾವಳಿ ನವಿ ಮುಂಬೈ ಮತ್ತು ವಡೋದರಾದಲ್ಲಿ ಮಾತ್ರ ನಡೆಯಲಿದೆ.
2 ಡಬಲ್ ಹೆಡರ್ ಪಂದ್ಯಗಳು
28 ದಿನಗಳ ಕಾಲ ನಡೆಯುವ ಡಬ್ಲ್ಯುಪಿಎಲ್ 4ನೇ ಆವೃತ್ತಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಎರಡು ಡಬಲ್ ಹೆಡರ್ ಪಂದ್ಯಗಳನ್ನು ಹೊರತುಪಡಿಸಿ, ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ಪ್ರಾರಂಭವಾಗಲಿವೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣವು ಪ್ರಾಥಮಿಕ ಸುತ್ತಿನ ಮತ್ತು ಮೊದಲ ಎರಡು ಡಬಲ್ ಹೆಡರ್ ಪಂದ್ಯಗಳನ್ನು ಆಯೋಜಿಸುತ್ತದೆ. ನಂತರ ಪಂದ್ಯಾವಳಿಯ ದ್ವಿತೀಯಾರ್ಧವನ್ನು ವಡೋದರಾದಲ್ಲಿ ಆಡಲಾಗುತ್ತದೆ. ವಡೋದರಾ ಪ್ಲೇಆಫ್ ಮತ್ತು ಫೈನಲ್ ಪಂದ್ಯವನ್ನು ಸಹ ಆಯೋಜಿಸಲಿದೆ.
ಪಂದ್ಯ ವೇಳಾಪಟ್ಟಿ
ದಿನಾಂಕ : ಮುಖಾಮುಖಿ : ಸ್ಥಳ
09-01-2026 : ಮುಂಬೈ ಇಂಡಿಯನ್ಸ್ vs ಆರ್‌ಸಿಬಿ : ನವಿ ಮುಂಬೈ
10-01-2026 :ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ :ನವಿ ಮುಂಬೈ
10-01-2026 :ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ :ನವಿ ಮುಂಬೈ
11-01-2026 :ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ :ನವಿ ಮುಂಬೈ
12-01-2026 :ಆರ್‌ಸಿಬಿ vs ಯುಪಿ ವಾರಿಯರ್ಸ್ : ನವಿ ಮುಂಬೈ
13-01-2026 :ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ :ನವಿ ಮುಂಬೈ
14-01-2026 :ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್ :ನವಿ ಮುಂಬೈ
15-01-2026 :ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ : ನವಿ ಮುಂಬೈ
16-01-2026 :ಆರ್‌ಸಿಬಿ vs ಗುಜರಾತ್ ಜೈಂಟ್ಸ್ : ನವಿ ಮುಂಬೈ
17-01-2026 :ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ : ನವಿ ಮುಂಬೈ
17-01-2026: ದೆಹಲಿ ಕ್ಯಾಪಿಟಲ್ಸ್ vs ಆರ್‌ಸಿಬಿ : ನವಿ ಮುಂಬೈ
19-01-2026 : ಗುಜರಾತ್ ಜೈಂಟ್ಸ್ vs ಆರ್‌ಸಿಬಿ; ವಡೋದರಾ
20-01-2026: ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ : ವಡೋದರಾ
22-01-2026 : ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್: ವಡೋದರಾ
24-01-2026 ;ಆರ್‌ಸಿಬಿ vs ದೆಹಲಿ ಕ್ಯಾಪಿಟಲ್ಸ್ :ವಡೋದರಾ
26-01-2026 ;ಆರ್‌ಸಿಬಿ vs ಮುಂಬೈ ಇಂಡಿಯನ್ಸ್ : ವಡೋದರಾ
27-01-2026 :ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ : ವಡೋದರಾ
29-01-2026 :ಯುಪಿ ವಾರಿಯರ್ಸ್ vs ಆರ್‌ಸಿಬಿ : ವಡೋದರಾ
30-01-2026 :ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ : ವಡೋದರಾ
01-02-2026 :ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ ;ವಡೋದರಾ
03-02-2026 :ಎಲಿಮಿನೇಟರ್: ವಡೋದರಾ
05-02-2026 : ಫೈನಲ್ ವಡೋದರಾ





