Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವಿಶ್ವಕಪ್: ಸತತ ಸೋಲಿನ ಬಳಿಕ ಶ್ರೀಲಂಕಾಕ್ಕೆ ಮೊದಲ ಜಯ

ಲಕ್ನೋ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಎಕಾನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ನೆದರ್ಲ್ಯಾಂಡ್ಸ್ ವಿರುದ್ಧ ಶ್ರೀಲಂಕಾ 5 ವಿಕೆಟ್ ಜಯ ಗಳಿಸಿದೆ.

ಮೊದಲು ಬ್ಯಾಟ್ ಬೀಸಿದ್ದ ನೆದರ್ಲ್ಯಾಂಡ್ಸ್ ಪರ ಸೈಬ್ರಾಂಡ್ ಹಾಗೂ ಲೊಗನ್ ವಾನ್ ಬೀಕ್ ಕೊನೆಯಲ್ಲಿ ಬಾರಿಸಿದ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ತಂಡ 49.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 262 ರನ್ ಪೇರಿಸಿತು.

ಡಚ್ಚರು ನೀಡಿದ ಸ್ಪರ್ಧಾತ್ಮಕ ಗುರಿ ಪಡೆದು ಬ್ಯಾಟಿಂಗ್ ಗೆ ಇಳಿದ ಶ್ರಿಲಂಕಾಗೆ ಆರಂಭಿಕ ಬ್ಯಾಟರ್ ಕುಸಾಲ್ ಪರೇರ(5) ರನ್ನು ಔಟ್ ಮಾಡುವ ಮೂಲಕ ಆರ್ಯನ್ ದತ್ ನೆದರ್ಲ್ಯಾಂಡ್ಸ್ ಗೆ ಪ್ರಾರಂಭಿಕ ಮುನ್ನಡೆ ತಂದುಕೊಟ್ಟರು. ಬಳಿಕ ಬ್ಯಾಟಿಂಗ್ ಬಂದ ನಾಯಕ ಕುಶಾಲ್ ಮೆಂಡಿಸ್ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದರು. ಲಂಕಾ ಪರ ಪಾತುಮ್ ನಿಸಾಂಕ 9 ಬೌಂಡರಿ ಸಹಿತ 54 ರನ್ ಬಾರಿಸಿ ಪೌಲ್ ವಾನ್ ಮೀಕೆರನ್ ಗೆ ವಿಕೆಟ್ ಒಪ್ಪಿಸಿದರೆ ಚರಿತ್ ಹಸಲಂಕ 44 ರನ್ ಗೆ ಆರ್ಯನ್ ದತ್ ಬೌಲಿಂಗ್ ನಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ನಾಲ್ಕನೇ ಕ್ರಮಾಂಕ ದಲ್ಲಿ ಬ್ಯಾಟಿಂಗ್ ಬಂದ ಸಧೀರ ಸಮರವಿಕ್ರಮ 7 ಬೌಂಡರಿ ಸಹಿತ ಅಜೇಯ 91 ರನ್ ಗಳಿಸುವ ಮೂಲಕ ಶ್ರಿಲಂಕಾಗೆ ಟೂರ್ನಿಯಲ್ಲಿ ಮೊದಲ ಜಯ ತಂದುಕೊಟ್ಟರು. ಅವರಿಗೆ ಸಾಥ್ ನೀಡಿದ್ದ ಧನಂಜಯ ಡಿಸಿಲ್ವ 30 ರನ್ ಬಾರಿಸಿದರು. ದುಶಾನ್ ಹೇಮಂತ 4 ರನ್ ಗಳಿಸಿದರು.

ನೆದರ್ಲ್ಯಾಂಡ್ಸ್ ಪರ ಆರ್ಯನ್ ದತ್ 3 ವಿಕೆಟ್ ಪಡೆದರೆ, ಪೌಲ್ ವಾನ್ ಮೀಕೆರನ್, ಕಾಲಿನ್ ಅಕೆರ್ಮಾನ್ ತಲಾ ಒಂದು ವಿಕೆಟ್ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ