Mysore
21
overcast clouds
Light
Dark

ವಿಶ್ವಕಪ್ ಫೈನಲ್: ಏರ್ ಶೋ ಮೂಲಕ ಪಂದ್ಯ ಆರಂಭ

ಅಹ್ಮದಾಬಾದ್‌ : ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಫೈನಲ್ ಪಂದ್ಯದ ವೇಳೆ ಹಲವು ಮನರಂಜನಾ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ( ಬಿಸಿಸಿಐ ) ತನ್ನ ಅಕೃತ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿದೆ.

ಕಾರ್ಯಕ್ರಮದ ಸಮಯವನ್ನು ನಿಗದಿಪಡಿಸಿದ್ದು, ಪಂದ್ಯಕ್ಕೂ ಮೊದಲು ಟಾಸ್, ಬಳಿಕ ಅಂದರೆ 1.35ರಿಂದ 1.50ರವರೆಗೆ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಲಿದೆ. ನರೇಂದ್ರಮೋದಿ ಸ್ಟೇಡಿಯಂನಲ್ಲಿ ಲೋಹದ ಹಕ್ಕಿಗಳು ಹಾರಾಟ ನಡೆಸಲಿವೆ.

ಮೊದಲು ಇನ್ನಿಂಗ್‍ನ ಡ್ರಿಂಕ್ಸ್ ಬ್ರೇಕ್ ವೇಳೆ ಆದಿತ್ಯ ಗ್ವ ಅವರು ಪ್ರದರ್ಶನ ನೀಡಲಿದ್ದಾರೆ. ಮೊದಲು ಇನ್ನಿಂಗ್ ಮುಗಿದ ಬಳಿಕ ಸಿಗುವ ಸಮಯದಲ್ಲಿ ಪ್ರೀತಮ್ ಚಕ್ರವರ್ತಿ, ಜೋನಿತಾ ಗಾಂ, ನಕಾಶ್ ಅಜೀಜ್, ಅಮಿತ್ ಮಿಶ್ರಾ, ಅಕಾಸ ಸಿಂಗ್ ಮತ್ತು ತುಷಾರ್ ಜೋಶಿ ಪ್ರದರ್ಶನಗಳು ನಡೆಯಲಿವೆ.

ಎರಡನೇ ಇನ್ನಿಂಗ್ಸ್ ನ ಡ್ರಿಂಕ್ಸ್ ಬ್ರೇಕ್ ವೇಳೆ ಲೇಸರ್ ಮತ್ತು ಲೈಟ್ ಶೋ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ. ಖ್ಯಾತ ಗಾಯಕಿ ದುವಾ ಲಿಪಾ ಪ್ರದರ್ಶನ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು, ಆದರೆ ಬಿಸಿಸಿಐ ಇಂದು ಬಿಡುಗಡೆ ಮಾಡಿ ಪಟ್ಟಿಯಲ್ಲಿ ದುವಾ ಲಿಪಾ ಹೆಸರಿಲ್ಲ.

ಈಗಾಗಲೇ ಇದ್ದಕ್ಕೆ ಬೇಕಾದ ಪೂರ್ವ ಸಿದ್ಧತಾ ತಯಾರಿಯನ್ನು ಸೂರ್ಯಕಿರಣ್ ತಂಡ ನಡೆಸಿದೆ. ಕಳೆದ 2 ದಿನಗಳಿಂದ ಇಲ್ಲಿ ಪ್ರಾಯೋಗಿಕ ಹಾರಾಟ ನಡೆಸಿ ಸರ್ವ ಸನ್ನದ್ಧವಾಗಿ ನಿಂತಿದೆ. ಈ ಬಾರಿಯ ಎಲ್ಲ ಲೀಗ್ ಪಂದ್ಯದ ವೇಳೆಯೂ ಬಿಸಿಸಿಐ ಸ್ಟೇಡಿಯಂಗಳಲ್ಲಿ ವಿನೂತನ ಶೈಲಿಯ ಲಸರ್ ಶೋಗಳ ಮೂಲಕ ನೆರದಿದ್ದ ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ಫೈನಲ್ ಪಂದ್ಯದಲ್ಲೂ ವಿಶಿಷ್ಠ ಶೈಲಿಯ ಲೇಸರ್ ಮತ್ತು ಲೈಟ್ ಶೋ ನಡೆಯಲಿದೆ. ಇದು ಎರಡನೇ ಇನ್ನಿಂಗ್ಸ್ನ ಡ್ರಿಂಕ್ಸ್ ಬ್ರೇಕ್ ವೇಳೆ ಪ್ರದರ್ಶನಗೊಳ್ಳಲಿದೆ ಎಂದು ಬಿಸಿಸಿಐ ತನ್ನ ಅಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಕೂಟದ ಉದ್ಘಾಟನ ಸಮಾರಂಭ ಮಾಡದೇ ಇದ್ದ ಬಿಸಿಸಿಐ ವಿರುದ್ಧ ಹಲವು ಟೀಕೆಗಳು ಕೇಳಿಬಂದಿತ್ತು. ಮೊದಲ ಬಾರಿಗೆ ಸಂಪೂರ್ಣವಾಗಿ ಕೂಟದ ಆತಿಥ್ಯ ಸಿಕ್ಕರೂ, ಅತ್ಯಂತ ಶ್ರೀೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿದ್ದರೂ ಬಿಸಿಸಿಐಗೆ ಉದ್ಘಾಟನ ಕಾರ್ಯಕ್ರಮ ನಡೆಸಲಾಗದಷ್ಟು ಕಷ್ಟ ಎದುರಾಯಿತೇ ಎಂಬ ಟಾಕ್ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದು ಮಾಡಿತ್ತು.

ಇದೀಗ ಸಮಾರೋಪ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಬಿಸಿಸಿಐ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದು ಸಮಾರೋಪ ಕಾರ್ಯಕ್ರಮದ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ