Mysore
31
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ವಿಶ್ವಕಪ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ

ಚೆನ್ನೈ: ಏಕದಿನ ವಿಶ್ವಕಪ್ ಕ್ರಿಕೆಟ್ ಕ್ರೀಡಾಕೂಟದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಭಾರತ ತಂಡವು ಪಂದ್ಯಕ್ಕೂ ಮುನ್ನವೇ ಆಘಾತ ಅನುಭವಿಸಿದ್ದು, ಉತ್ತಮ ಲಯದಲ್ಲಿದ್ದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಡೆಂಗ್ಯೂ ಜ್ವರಕ್ಕೆ ತುತ್ತಾಗಿರುವುದರಿಂದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಇಶಾನ್ ಕಿಶನ್ ಆರಂಭಿಕ ಬ್ಯಾಟರ್ ಆಗಿ ಕ್ರೀಸ್ ಗೆ ಇಳಿಯಲಿದ್ದಾರೆ.

ಟಾಸ್ ಗೆದ್ದ ನಂತರ ಮಾತನಾಡಿದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, “ಪಿಚ್ ಉತ್ತಮವಾಗಿರುವುದರಿಂದ ನಾವು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೇವೆ. ಸೂರ್ಯ ಹೊರಗೆ ಬಂದಿರುವುದರಿಂದ ನಮಗೆ ಬ್ಯಾಟಿಂಗ್ ಮಾಡಲು ಉತ್ತಮ ಅವಕಾಶ ಒದಗಿದೆ. ನಾವು ಕಳೆದ ಕೆಲವು ತಿಂಗಳಿಂದ ಸಾಕಷ್ಟು ಆಡಿದ್ದೇವೆ. ಈ ಪಂದ್ಯಕ್ಕೆ ಟ್ರಾವಿಸ್ ಹೆಡ್ ಲಭ್ಯರಿಲ್ಲ. ಅಬಾಟ್ ಹಾಗೂ ಜೋಶ್ ಆಡುತ್ತಿಲ್ಲ” ಎಂದು ತಿಳಿಸಿದ್ದಾರೆ.

“ಇಲ್ಲಿನ ಪಿಚ್ ಬೌಲರ್ ಗಳ ಪಾಲಿಗೆ ಕೊಂಚ ನಿಧಾನ ಗತಿಯಂದಂತೆ ಕಾಣಿಸುತ್ತಿದೆ. ನಾವು ಆರಂಭದಲ್ಲೇ ಬೌಲಿಂಗ್ ಅನ್ನು ನಿಖರವಾಗಿ ಮಾಡಬೇಕಿದೆ. ಶುಭಮನ್ ಗಿಲ್ ಇನ್ನೂ ಚೇತರಿಸಿಕೊಳ್ಳದೆ ಇರುವುದರಿಂದ ಅವರ ಬದಲಿಗೆ ಇಶಾನ್ ಕಿಶನ್ ಆಡಲಿದ್ದಾರೆ. ಅವರು ಬ್ಯಾಟಿಂಗ್ ಆರಂಭಿಸಲಿದ್ದಾರೆ” ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ