ಹೊಸದಿಲ್ಲಿ: ಒಂದು ಕಾಲದಲ್ಲಿ ಭಾರತ ತಂಡದ ವೇಗದ ಬೌಲರ್ ಎಂದು ಗುರುತಿಸಿಕೊಂಡಿದ್ದ 35 ವರ್ಷದ ವರುಣ್ ಆರನ್ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಜಾರ್ಖಂಡ್ ತಂಡ ಪ್ರತಿನಿಧಿಸಿದ್ದ ವರುಣ್ ಟೂರ್ನಿಯಿಂದ ತಂಡ ಹೊರಬಿದ್ದ ನಂತರ ವಿದಾಯ ಘೋಷಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, 20 ವರ್ಷಗಳಿಂದ ನನ್ನ ಜೀವನ, ಉಸಿರು ಕ್ರಿಕೆಟ್ ಆಗಿತ್ತು. ಗಾಯದ ಸಮಸ್ಯೆಗಳು ನನ್ನನ್ನು ಭಾರತ ತಂಡದಿಂದ ದೂರ ಉಳಿಯುವಂತೆ ಮಾಡಿದೆ. ಆದ ಕಾರಣ ನಾನು ಕ್ರಿಕೆಟ್‌ನ ಎಲ್ಲ ಮಾದರಿಗೂ ನಿವೃತ್ತಿ ಷೋಷಿಸುತ್ತಿದ್ದೇನೆ ಎಂದು ಬರೆದು ಕೊಂಡಿದ್ದಾರೆ. 2015ರ ನಂತರ ಅವರು ಭಾರತ ತಂಡದಲ್ಲಿ ಆಟ ಆಡಿರಲಿಲ್ಲ.
21ನೇ ವಯಸ್ಸಿನಲ್ಲಿ ವೇಗದ ಬೌಲರ್ ಆಗಿ 2010-11ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ದೇಶದ ಗಮನ ಸೆಳೆದಿದ್ದರು. ಗುಜರಾತ್ ವಿರುದ್ಧ ಫೈನಲ್‌ನಲ್ಲಿ ಪ್ರತಿ ಗಂಟೆಗೆ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.
2011 ರಲ್ಲಿ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ವರುಣ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದರು. ಅದೇ ವರ್ಷ ವೆಸ್ಟ್ ಇಂಡೀಶ್ ವಿರುದ್ಧದ ಟೆಸ್ಟ್‌ಗೂ ಪಾದರ್ಪಣೆ ಮಾಡಿದ್ದರು.
ಅಂತರಾಷ್ಟ್ರೀಯ ಮಟ್ಟದಲ್ಲಿ 9 ಏಕದಿನ ಮತ್ತು 9 ಟೆಸ್ಟ್ ಪಂದ್ಯವಾಡಿರುವ ವರುಣ್ 29 ವಿಕೆಟ್ ಪಡೆದಿದ್ದಾರೆ.
ಲಿಸ್ಟ್ ಎ ನಲ್ಲಿ 88 ಪಂದ್ಯಗಳು ಆಡಿರುವ ವರುಣ್ 24.67ರ ಸರಾಸರಿಯಲ್ಲಿ 141 ವಿಕೆಟ್‌ಗಳನ್ನು ಪಡೆದಿದ್ದಾರೆ. 2011 ರಿಂದ 2022 ರ ಅವಧಿಯಲ್ಲಿ ಆರ್‌ಸಿಬಿ ಸೇರಿ ಐದು ಐಪಿಎಲ್ ತಂಡಗಳನ್ನು ಪ್ರತಿನಿಧಿಸಿ 52 ಪಂದ್ಯಗಳಿಂದ 44 ವಿಕೆಟ್ ಗಳಿಸಿದ್ದಾರೆ. 2022 ರಲ್ಲಿ ಗುಜರಾತ್ ಟೈಟಾನ್ಸ್ ಐಪಿಎಲ್ ಟೂರ್ನಿ ಗೆದ್ದಾಗ ಆ ತಂಡವನ್ನು ಪ್ರತಿನಿಧಿಸಿದ್ದರು