Mysore
21
overcast clouds
Light
Dark

Under 19 Worldcup: ಸೂಪರ್6 ಹಂತದ ವೇಳಾಪಟ್ಟಿ; ಭಾರತದ ಎದುರಾಳಿಗಳಾರು?

ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆಯುತ್ತಿರುವ ಅಂಡರ್19 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತ ಮುಕ್ತಾಯಗೊಂಡಿದ್ದು, ನಾಳೆಯಿಂದ ( ಜನವರಿ 30 ) ಸೂಪರ್‌ ಸಿಕ್ಸ್‌ ಹಂತದ ಪಂದ್ಯಗಳು ಆರಂಭಗೊಳ್ಳಲಿದೆ.

ಲೀಗ್‌ ಹಂತದಲ್ಲಿದ್ದ 4 ಗುಂಪುಗಳಿಂದ ತಲಾ ಮೂರು ತಂಡಗಳು ಸೂಪರ್6 ಸುತ್ತಿಗೆ ಆಯ್ಕೆಯಾಗಿದ್ದು, ಒಟ್ಟು 12 ತಂಡಗಳು ಪ್ರವೇಶಿಸಿವೆ. ಈ 12 ತಂಡಗಳನ್ನು ಎರಡು ತಂಡಗಳನ್ನಾಗಿ ವಿಭಜಿಸಲಾಗಿದೆ. ಎಲ್ಲಾ ತಂಡಗಳು ತಲಾ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು, ಅಂಕಪಟ್ಟಿಯಲ್ಲಿ ಟಾಪ್‌ ನಾಲ್ಕು ಸ್ಥಾನಗಳನ್ನು ಪಡೆದುಕೊಳ್ಳುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಸೋಲಿಲ್ಲದ ಸರದಾರನಾಗಿರುವ ಟೀಮ್ಇಂಡಿಯಾಗೆ ನ್ಯೂಜಿಲೆಂಡ್‌ ಹಾಗೂ ನೇಪಾಳ ತಂಡಗಳು ಈ ಸುತ್ತಿನಲ್ಲಿ ಎದುರಾಳಿಗಳಾಗಿವೆ.

ಸೂಪರ್‌ ಸಿಕ್ಸ್‌ ಹಂತದ ಯಾವ ಗುಂಪಿನಲ್ಲಿ ಯಾವ ತಂಡಗಳಿವೆ ಎಂಬ ಮಾಹಿತಿ ಹಾಗೂ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ..

ಗುಂಪು 1 : ಭಾರತ, ನ್ಯೂಜಿಲೆಂಡ್, ನೇಪಾಳ, ಐರ್ಲೆಂಡ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ
ಗುಂಪು 2: ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಶ್ರೀಲಂಕಾ, ಜಿಂಬಾಬ್ವೆ ಹಾಗೂ ವೆಸ್ಟ್ಇಂಡೀಸ್

ವೇಳಾಪಟ್ಟಿ:
ಜನವರಿ 30:
ಭಾರತ vs ನ್ಯೂಜಿಲೆಂಡ್ ಸೂಪರ್ ಸಿಕ್ಸ್, ಗುಂಪು 1
ಶ್ರೀಲಂಕಾ vs ವೆಸ್ಟ್ ಇಂಡೀಸ್ ಸೂಪರ್ ಸಿಕ್ಸ್, ಗುಂಪು 2
ಪಾಕಿಸ್ತಾನ vs ಐರ್ಲೆಂಡ್ ಸೂಪರ್ ಸಿಕ್ಸ್, ಗುಂಪು 1

ಜನವರಿ 31:
ಆಸ್ಟ್ರೇಲಿಯಾ vs ಇಂಗ್ಲೆಂಡ್ ಸೂಪರ್ ಸಿಕ್ಸ್, ಗುಂಪು 2
ನೇಪಾಳ vs ಬಾಂಗ್ಲಾದೇಶ ಸೂಪರ್ ಸಿಕ್ಸ್, ಗುಂಪು 1
ಜಿಂಬಾಬ್ವೆ vs ದಕ್ಷಿಣ ಆಫ್ರಿಕಾ ಸೂಪರ್ ಸಿಕ್ಸ್, ಗುಂಪು 2

ಫೆಬ್ರವರಿ 2:
ದಕ್ಷಿಣ ಆಫ್ರಿಕಾ vs ಶ್ರೀಲಂಕಾ ಸೂಪರ್ ಸಿಕ್ಸ್, ಗುಂಪು 2
ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ ಸೂಪರ್ ಸಿಕ್ಸ್, ಗುಂಪು 2
ಭಾರತ vs ನೇಪಾಳ ಸೂಪರ್ ಸಿಕ್ಸ್, ಗುಂಪು 1

ಫೆಬ್ರವರಿ 3:
ಪಾಕಿಸ್ತಾನ vs ಬಾಂಗ್ಲಾದೇಶ ಸೂಪರ್ ಸಿಕ್ಸ್, ಗುಂಪು 1
ಇಂಗ್ಲೆಂಡ್ vs ಜಿಂಬಾಬ್ವೆ ಸೂಪರ್ ಸಿಕ್ಸ್, ಗುಂಪು 2
ನ್ಯೂಜಿಲೆಂಡ್ vs ಐರ್ಲೆಂಡ್ ಸೂಪರ್ ಸಿಕ್ಸ್, ಗುಂಪು 1

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ