Mysore
26
scattered clouds

Social Media

ಭಾನುವಾರ, 16 ಮಾರ್ಚ್ 2025
Light
Dark

ಇಂದು ಭಾರತ-ಪಾಕ್ ಮತ್ತೆ ಮುಖಾಮುಖಿ

ದುಬೈ: ಶುಕ್ರವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಹಾಂಗ್‌ಕಾಂಗ್ ವಿರುದ್ಧ ಪಾಕಿಸ್ತಾನ ದಾಖಲೆಯ ೧೫೫ ರನ್ ಅಂತರದ ಗೆಲುವು ದಾಖಲಿಸಿತು. ಇದರೊಂದಿಗೆ ಭಾನುವಾರ ನಡೆಯಲಿರುವ ಸೂಪರ್ ೪ ಹಂತದ ಪಂದ್ಯದಲ್ಲಿ ಭಾರತ ತಂಡವನ್ನು ಪಾಕಿಸ್ತಾನ ಎದುರಿಸಲಿದೆ. ಸೂಪರ್ ೪ ಹಂತದ ಮೊದಲ ಪಂದ್ಯ ಶಾರ್ಜಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ ೭.೩೦ಕ್ಕೆ ಪಂದ್ಯ ಆರಂಭವಾಗಲಿದೆ.
ಎ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್ ೪ ಹಂತಕ್ಕೆ ಲಗ್ಗೆಯಿಟ್ಟಿದೆ. ಹಾಂಗ್‌ಕಾಂಗ್ ಎರಡು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದೆ.
ಸೂಪರ್ ೪ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಫೈನಲ್‌ಗೆ ತೇರ್ಗಡೆ ಪಡೆಯಲಿವೆ. ಹೀಗಾಗಿ ಫೈನಲ್‌ನಲ್ಲೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆಗಳಿವೆ.
ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೂಪರ್ ೪ ಹಂತಕ್ಕೆ ತೇರ್ಗಡೆ ಹೊಂದಿವೆ. ಅಫ್ಘಾನಿಸ್ತಾನ ಎರಡೂ ಪಂದ್ಯಗಳನ್ನು ಗೆದ್ದರೆ ಲಂಕಾ ಅಫ್ಗಾನ್ ವಿರುದ್ಧ ಸೋಲು ಅನುಭವಿಸಿತ್ತು.

ಏಷ್ಯಾಕಪ್‌ನಲ್ಲಿ ೧೬ ಬಾರಿ ಮಖಾಮುಖಿಯಾಗಿದ್ದು, ೯ ಬಾರಿ ಭಾರತಕ್ಕೆ ಗೆಲುವು ಸಾಧಿಸಿದೆ. ೫ ಬಾರಿ ಪಾಕಿಸ್ತಾನಕ್ಕೆ ಜಯ ಹಾಗೂ ೨ ಪಂದ್ಯಗಳಲ್ಲಿ ಫಲಿತಾಂಶವಿಲ್ಲವಾಗಿದೆ.

ಭಾರತದ ಹಾದಿ…
ಸೂಪರ್ ೪ ಹಂತದಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ ತಂಡದ ಸವಾಲನ್ನು ಎದುರಿಸಲಿದೆ. ಬಳಿಕ ಕ್ರಮವಾಗಿ ಮಂಗಳವಾರ ಶ್ರೀಲಂಕಾ ಮತ್ತು ಗುರುವಾರದಂದು ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ.

ಸೂಪರ್ ೪ ವೇಳಾಪಟ್ಟಿ:

ಸೆ.೦೪, ಭಾನುವಾರ: ಭಾರತ-ಪಾಕಿಸ್ತಾನ
ಸೆ.೦೬, ಮಂಗಳವಾರ: ಭಾರತ-ಶ್ರೀಲಂಕಾ
ಸೆ.೦೭, ಬುಧವಾರ: ಪಾಕಿಸ್ತಾನ-ಅಫ್ಘಾನಿಸ್ತಾನ
ಸೆ.೦೮, ಗುರುವಾರ: ಭಾರತ-ಅಫ್ಘಾನಿಸ್ತಾನ
ಸೆ.೦೯, ಶುಕ್ರವಾರ: ಶ್ರೀಲಂಕಾ-ಪಾಕಿಸ್ತಾನ

ಫೈನಲ್: ಸೆ.೧೧ ಭಾನುವಾರ, ದುಬೈ ನಲ್ಲಿ ನಡೆಯಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ