ಅಹಮದಾಬಾದ್: ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರಿಸಿರುವ ಗುಜರಾತ್ ಟೈಟನ್ಸ್ ಆರಂಭಿಕ ಶುಭಮನ್ ಗಿಲ್ ಮುಂಬೈ ಇಂಡಿಯನ್ಸ್ ವಿರುದ್ಧ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶತಕ (129 ರನ್) ಸಿಡಿಸಿ ಕ್ರಿಕೆಟ್ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ ಪರ ಶುಭಮನ್ ಗಿಲ್ ಸಿಡಿಲಬ್ಬರದ ಶತಕ (129 ರನ್, 7X4, 10X6) ಸಿಡಿಸಿದರು. ಆ ಮೂಲಕ ಐಪಿಎಲ್ ಪ್ಲೇಆಫ್ಸ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಹಾಗೂ ಟೂರ್ನಿಯಲ್ಲಿ 800 ರನ್ ಪೂರೈಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಶುಭಮನ್ ಗಿಲ್ ಶತಕದ ಬಲದಿಂದ ಗುಜರಾತ್ ಟೈಟನ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ದ 62 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ 2023ರ ಐಪಿಎಲ್ ಫೈನಲ್‌ಗೆ ಹಾರ್ದಿಕ್ ಪಾಂಡ್ಯ ಪಡೆ ಅರ್ಹತೆ ಪಡೆಯಿತು. ಅಂದಹಾಗೆ ಶುಭಮನ್ ಗಿಲ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಎಬಿ ಡಿ ವಿಲಿಯರ್ಸ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ವಿಶ್ವದ ಕ್ರಿಕೆಟ್ ದಿಗ್ಗಜರು ಶ್ಲಾಘಿಸಿದ್ದಾರೆ.
“ವಾವ್ಹ್! ಶುಭಮನ್ ಗಿಲ್ ಅವರನ್ನು ಹೊಗಳಲು ನನ್ನಲ್ಲಿ ಪದಗಳೇ ಇಲ್ಲ,” ಎಂದು ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಟ್ವೀಟ್ ಮಾಡುವ ಮೂಲಕ ಯುವ ಆಟಗಾರನನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
His ability to identify moments and accelerate, with consistency, puts him in a class of his own. Also keep in mind, most of his games have been at Ahmedabad, one of the bigger grounds around. Well played Shubman👏
— AB de Villiers (@ABdeVilliers17) May 26, 2023
ಭರ್ಜರಿ ಶತಕ ಸಿಡಿಸಿದ ಶುಭಮನ್ ಗಿಲ್ ಅವರನ್ನು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್, ಭಾರತೀಯ ಕ್ರಿಕೆಟ್‌ನ ಹೊಸ ರಾಜಕುಮಾರ್ ಎಂದು ಬಣ್ಣಿಸಿದ್ದಾರೆ. “ಭಾರತೀಯ ಕ್ರಿಕೆಟ್‌ನ ನೂತನ ರಾಜಕುಮಾರನಿಂದ ಮತ್ತೊಂದು ಶತಕ ಮೂಡಿ ಬಂದಿದೆ,” ಎಂದು ಸಿಕ್ಸರ್‌ಗಳ ಸರದಾರ ಗುಣಗಾನ ಮಾಡಿದ್ದಾರೆ.
Another great innings by the new prince of Indian cricket !! @ShubmanGill 👏 GTvsmi #IPL2O23
— Yuvraj Singh (@YUVSTRONG12) May 26, 2023
“ಶುಭಮನ್ ಗಿಲ್ ಅವರ ಆಟ ನೋಡಲು ನಿಜವಾಗಿಯೂ ಸಂತೋಷವಾಗಿತ್ತು,” ಎಂದು ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಟ್ವಿಟ್ ಮಾಡಿ ಗುಣಗಾನ ಮಾಡಿದ್ದಾರೆ.
“ಯುವ ಮಾಂತ್ರಿಕನಿಂದ ಮತ್ತೊಂದು ಶತಕ ಮೂಡಿ ಬಂದಿದೆ. ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಪ್ರಕಾಶಮಾನವಾಗಿ ಹೊಳೆಯುತ್ತಿದ್ದಾರೆ. ಇದೇ ಲಯವನ್ನು ಮುಂದುರಿಸಿ ಚಾಂಪಿಯನ್,” ಎಂದು ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Another brilliant century by the young maestro @ShubmanGill ! 🙌 The future of Indian cricket shining bright. Keep rocking, champ! 💪💯#MIvGT #IPL2023
— Suresh Raina🇮🇳 (@ImRaina) May 26, 2023
ಕ್ರಿಕೆಟ್ ದಿಗ್ಗಜರಾದ ರಾಬಿನ್ ಉತ್ತಪ್ಪ, ಇಯಾನ್ ಬಿಷಪ್, ಮಯಾಂಕ್ ಅಗರ್ವಾಲ್, ಅಶ್ವಲ್ ಪ್ರಿನ್ಸ್, ಮೈಕಲ್ ವಾನ್, ಸಂಜಯ್ ಮಾಂಜ್ರೇಕರ್ ಸೇರಿದಂತೆ ದಿಗ್ಗಜರು ಹಾಗೂ ಅಭಿಮಾನಿಗಳು ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶುಭಮನ್ ಗಿಲ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಗುಜರಾತ್ ಟೈಟನ್ಸ್‌ಗೆ 62 ರನ್ ಗೆಲುವು: ಶುಕ್ರವಾರ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ , ಶುಭಮನ್ ಗಿಲ್ (129 ರನ್) ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 233 ರನ್ ಬೃಹತ್ ಮೊತ್ತ ಕಲೆ ಹಾಕಿತ್ತು.
ಬಳಿಕ ಈ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್, ಸೂರ್ಯ ಕುಮಾರ್ ಯಾದವ್ (61 ರನ್) ಅರ್ಧಶತಕದ ಹೊರತಾಗಿಯೂ ಇನ್ನಿಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ 18.2 ಓವರ್‌ಗಳಿಗೆ 171 ರನ್‌ಗಳಿಗೆ ಆಲೌಟ್ ಆಯಿತು. ಈ ಸೋಲಿನಿಂದ ಮುಂಬೈ ಇಂಡಿಯನ್ಸ್ ತನ್ನ ಪಯಣ ಮುಗಿಸಿದರೆ, ಗುಜರಾತ್ ಟೈಟನ್ಸ್ ಭಾನುವಾರ ಇದೇ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿದೆ.