Mysore
21
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಗಂಡು ಮಗುವಿನ ತಂದೆಯಾದ ದಿ ಗ್ರೇಟ್‌ ಖಲಿ

ಡಬ್ಲೂಡಬ್ಲೂಇ ಖ್ಯಾತಿಯ ದಿ ಗ್ರೇಟ್‌ ಖಲಿ ಗಂಡು ಮಗುವಿನ ತಂದೆಯಾಗಿದ್ದಾರೆ. ಎರಡನೇ ಬಾರಿಗೆ ತಂದೆಯಾಗಿರೊ ಖುಷಿಯಲ್ಲಿರುವ ಖಲಿ ತಮ್ಮ ಅಜಾನುಬಾಹು ತೋಳುಗಳಿಂದ ತಮ್ಮ ಮುದ್ದು ಮಗನನ್ನು ಅಪ್ಪಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದು, ನಿಮ್ಮ ಆಶಿರ್ವಾದದಿಂದ ಇಂದು ನಾನು ಗಂಡು ಮಗುವಿನ ತಂದೆಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದೀಗ ಖಲಿ ಎರಡನೇ ಬಾರಿಗೆ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಖಲಿ ಅವರಿಗೆ ಈಗಾಗಲೇ 9 ವರ್ಷದ ಅವ್ಲೀನ್‌ ಕೌರ್‌ ಎಂಬ ಮಗಳಿದ್ದಾಳೆ. ಇದೀಗ ಖಲಿ ಕುಟುಂಬಕ್ಕೆ ಜ್ಯೂನಿಯ ಖಲಿ ಆಗಮನವಾಗಿದ್ದು, ಖಲಿ ದಂಪತಿಯ ಸಂಭ್ರಮ ದುಪ್ಪಟ್ಟಾಗಿದೆ.

ಡಬ್ಲೂಡಬ್ಲೂಇ ಕಾರ್ಯಕ್ರಮ ಹಿಂದಿನಿಂದಲೂ ಕೂಡ ಯುವ ಸಮೂಹದ ನೆಚ್ಚಿನ ಆಟವಾಗಿದೆ. ಈ ಪಂದ್ಯದಲ್ಲಿ ಸೆಣಸಾಡುವ ಧೈತ್ಯ ಸ್ಪರ್ಧಾಳುಗಳ ದೇಹದಾಡ್ಯತೆಯನ್ನು ನೋಡಿದರೆ ಎಂತಹವರು ಕೂಡ ಹುಬ್ಬೇರಿಸುತ್ತಾರೆ. ಡಬ್ಲೂಡಬ್ಲೂಇ ಪಂದ್ಯಾಟದ ಭಾರತೀಯ ಕುಸ್ತಿ ಪಟು ದಿ ಗ್ರೇಟ್‌ ಖಲಿಯಬಗ್ಗೆ ಕೇಳದೆ ಇರುವವರಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಖಲಿಯ ಹೆಸರು ದಲೀಪ್‌ ಸಿಂಗ್‌ ರಾಣ. ಡಬ್ಲೂಡಬ್ಲೂಇ ಕಾರ್ಯಕ್ರಮದ ಮೂಲಕ ದಿ ಗ್ರೇಟ್‌ ಖಲಿ ಎಂದೇ ಖ್ಯಾತರಾಗಿರುವ ಇವರು ತಮ್ಮ ಅಸಧಾರಣ ಎತ್ತರ, ನಿಬ್ಬೆರಗಾಗಿಸುವ ಮೈಕಟ್ಟಿನಿಂದಲೇ ಪ್ರಸಿದ್ಧಿ ಪಡೆದಿದ್ದಾರೆ.

ದಿ ಗ್ರೇಟ್‌ ಖಲಿ ಅವರು ವಿಶ್ವ ವಿಖ್ಯಾತ ಡಬ್ಲೂಡಬ್ಲೂಇ ಸ್ಪರ್ಧೆಯಲ್ಲಿ ಹೆವಿವೆಯ್ಟ್‌ ಚಾಂಪಿಯನ್‌ಶಿಪ್‌ ನಲ್ಲಿ ಜಯಗಳಿಸಿದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಇನ್ನು ಡಬ್ಲೂಡಬ್ಲೂಇ ಚಾಂಪಿಯನ್‌ಶಿಪ್‌ ಪಡೆದ ಬಳಿಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ದಿ ಗ್ರೇಟ್‌ ಖಲಿ ಸಿನಿಮಾದಲ್ಲಿಯೂ ಸಹ ನಟಿಸಿದ್ದಾರೆ.ಅದಷ್ಟೇ ಅಲ್ಲದೇ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೊ ಬಿಗ್‌ ಬಾಸ್‌ ಹಿಂದಿ ಯಲ್ಲಿಯೂ ಕೂಡ ಸ್ಪರ್ದಿಯಾಗಿ ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!