Mysore
23
overcast clouds
Light
Dark

ICC t20 worldcup: ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಈವರೆಗಿನ ಸಾಧನೆಯಿದು!

ಇದೇ ಜೂನ್.‌2 ರಿಂದ ವೆಸ್ಟ್‌ ಇಂಡೀಸ್‌ ಹಾಗೂ ಅಮೇರಿಕಾ ಸಹಭಾಗಿತ್ವದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಸಜ್ಜಾಗಿದೆ. ಅನುಭವಿ ಹಾಗೂ ಯುವ ಬ್ಯಾಟರ್‌ಗಳ ದಂಡೇ ಇರುವ ಈ ತಂಡ ಈ ಬಾರಿಯ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದು, ಈ ತಂಡಕ್ಕೆ ರೋಹಿತ್‌ ಶರ್ಮಾ ಸಾರಥ್ಯ ವಹಿಸಲಿದ್ದಾರೆ.

ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಜೂನ್‌.5 ರಂದು ಐರ್ಲೆಂಡ್‌ ವಿರುದ್ಧ ಪಂದ್ಯ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.

ಇನ್ನು ಒಟ್ಟು 11 ವರ್ಷಗಳ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಮಾಡಿರುವ ಸಾಧನೆಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

2007: ಚೊಚ್ಚಲ ಟಿ20 ವಿಶ್ವಕಪ್‌ ಟೂರ್ನಿ ನಡೆದದ್ದು 2007 ರಲ್ಲಿ. ಈ ಆವೃತ್ತಿಯನ್ನು ಸೌಥ್‌ ಆಫ್ರಿಕಾ ಆಯೋಜಿಸಿತ್ತು. ಸೆಪ್ಟೆಂಬರ್‌ 24 ರಂದು ಜೋಹಾನ್ಸ್‌ ಬರ್ಗ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ್‌ ತಂಡವನ್ನು 5 ರನ್‌ಗಳ ಅಂತರಿದಂದ ಮಣಿಸಿದ ಎಂ.ಎಸ್‌ ಧೋನಿ ನೇತೃತ್ವದ ಟೀಂ ಇಂಡಿಯಾ ಮೊಲದ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

2009: ಇಂಗ್ಲೆಂಡ್‌ ನಲ್ಲಿ ನಡೆದ ಎರಡನೇ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಆಟ ಆಡಲಿಲ್ಲ. ಈ ಟೂರ್ನಿಯಲ್ಲಿ ಇಂಡಿಯಾ ಸೂಪರ್‌-8 ಅಂತರದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತು. ಟೂರ್ನಿಯಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಸೋತು ನಿರ್ಗಮಿಸಿತು.

2010: ವೆಸ್ಟ್‌ ಇಂಡೀಸ್‌ ಆಯೋಜಿಸಿದ್ದ ಈ ಟೂರ್ನಿಯಲ್ಲಿಯೂ ಸಹಾ ಟೀಂ ಇಂಡಿಯಾ ಗ್ರೂಪ್‌ ಹಂತದಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸೂಪರ್‌-8 ಹಂತಕ್ಕೆ ತಲುಪಿತು. ಆದರೆ ಕಳೆದ ಸೀಸನ್‌ನಂತೆಯೇ ಇದರಲ್ಲಿಯೂ ಸೋತು ಟೂರ್ನಿಯಿಂದ ಹೊರಬಿದ್ದಿತು.

2012: ಸೆಪ್ಟೆಂಬರ್‌ನಲ್ಲಿ ನಡೆದ ಈ ಟೂರ್ನಿಯನ್ನು ಶ್ರೀಲಂಕಾ ಆಯೋಜಿಸಿತ್ತು. ಟೀಂ ಇಂಡಿಯಾ ಇದರಲ್ಲಿ ಸೂಪರ್‌-8 ಹಂತದಲ್ಲಿ ಮೂರಕ್ಕೆ ಎರಡು ಪಂದ್ಯಗಳನ್ನು ಗೆದ್ದು ಸೆಮಿಸ್‌ಗೆ ಅರ್ಹತೆ ಪಡೆಯಿತು. ಆದರೆ ನೆಟ್‌ ರನ್‌ರೇಟ್‌ ಆಧಾರದಲ್ಲಿ ಹೆಚ್ಚು ಅಂಕ ಪಡೆದಿದ್ದ ಪಾಕಿಸ್ತಾನ ಟೀಂ ಇಂಡಿಯಾವನ್ನು ಬದಿಗೊತ್ತಿ ಸೆಮಿಸ್‌ಗೆ ಲಗ್ಗೆಯಿಟ್ಟಿತು. ಆ ಮೂಲಕ ಟೀಂ ಇಂಡಿಯಾ ಅಭಿಯಾನ ಅಂತ್ಯಗೊಂಡಿತ್ತು.

2014: ಈ ಬಾರಿ ಬಾಂಗ್ಲಾದೇಶ ಆಯೋಜಿಸಿದ್ದ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿತು. ಆದರೆ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿತು. ಈ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗರನಾಗಿ ವಿರಾಟ್‌ ಮುಂಚೂಣಿಯಲ್ಲಿದ್ದರು.

2016: ಭಾರತವೇ ಆತಿಥ್ಯ ವಹಿಸಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರೀ ಮುಖಭಂಗ ಅನುಭಿವಿಸಿತ್ತು ಟೀಂ ಇಂಡಿಯಾ. ಸೆಮಿಸ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಹೀನಾಯ ಪ್ರದರ್ಶನ ನೀಡಿದ ಟೀಂ ಇಂಡಿಯಾ ಸೆಮಿಸ್‌ಗೆ ಅಭಿಯಾನ ಮುಗಿಸಿದರು. ಟೀಮ್‌ ಇಂಡಿಯಾ ಸೋಲಿಸಿದ ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌ ವಿರುದ್ಧ ಗೆದ್ದು ದಾಖಲೆಯ ಎರಡನೇ ಬಾರಿಗೆ ವಿಶ್ವಕಪ್‌ಗೆ ಮುತ್ತಿಕ್ಕಿತು.

2021: ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಆಡಿದ ಟೀಂ ಇಂಡಿಯಾಗೆ ಭಾರೀ ಮುಖಭಂಗ ಉಂಟಾಯಿತು. ಪಾಕಿಸ್ತಾನದ ವಿರುದ್ಧ ನೋ ಲಾಸ್‌ನಲ್ಲಿ ಪಂದ್ಯ ಸೋಲುವ ಮೂಲಕ ಟಾಪ್‌-6 ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರಬಿದ್ದಿತು.

20222: ಆಸೀಸ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸೆಮಿಸ್‌ ಗೆ ಅರ್ಹತೆ ಪಡೆಯಿತು. ಆದರೆ ಸೆಮಿಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನೋ ಲಾಸ್‌ನಲ್ಲಿ ಪಂದ್ಯ ಸೋಲುವ ಮೂಲಕ ಹೀನಾಯ ಸೋಲು ಅನುಭವಿಸಿ ಅಭಿಯಾನ ಅಂತ್ಯಗೊಳಿಸಿತು. ಈ ಸೀಸನ್‌ನಲ್ಲಿ ವಿರಾಟ್‌ 296 ರನ್‌ಗಳಿಸಿ ಟಾಪ್‌ ಸ್ಕೋರರ್‌ ಆಗಿ ಹೊರಹೊಮ್ಮಿದರು.

ಇನ್ನು ವಿಶ್ವಕಪ್‌ನಲ್ಲಿ ಭಾರತದ ಆಟಗಾರನೊಬ್ಬ ಶತಕ ಸಿಡಿಸಿರುವ ದಾಖಲೆ ಸುರೇಶ್‌ ರೈನಾ ಪಾಲಾಗಿದೆ. 2010ರಲ್ಲಿ ಸೌಥ್‌ ಆಫ್ರಿಕಾ ವಿರುದ್ಧ ಶತಕ ಸಿಡಿಸಿದ್ದ ರೈನಾ ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮತ್ತು ಈವರೆಗೆ ರೈನಾ ಹೊರತುಪಡಿಸಿ ಭಾರತ ಬೇರಾವ ಆಟಗಾರರಿಂದಲೂ ಟಿ20 ವಿಶ್ವಕಪ್‌ ಶತಕ ದಾಖಲಾಗಿಲ್ಲ.