Mysore
21
mist

Social Media

ಗುರುವಾರ, 11 ಡಿಸೆಂಬರ್ 2025
Light
Dark

T20 Worldcup 2024: ಸೂಪರ್‌ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋತ ಬಲಿಷ್ಠ ಆಸ್ಟ್ರೇಲಿಯಾ!

ಕಿಂಗ್‌ಸ್ಟನ್:‌ ಇಲ್ಲಿನ ಆರ್ನಸ್‌ ಆರ್ನೊಸ್‌ ವೇಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಥಾನಿಸ್ತಾನ ತಂಡಗಳ ನಡುವೆ‌ ನಡೆದ ಗ್ರೂಪ್‌ ಸೂಪರ್ 8ರ ಗ್ರೂಪ್‌ 1 ಪಂದ್ಯದಲ್ಲಿ ಆಸ್ಟ್ರೇಲಿಯಾ 21 ರನ್‌ಗಳ ಸೋಲನ್ನು ಅನುಭವಿಸುವ ಮೂಲಕ ಮುಖಭಂಗಕ್ಕೊಳಗಾಗಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ಆರಂಭಿಕ ಆಟಗಾರರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 148 ರನ್‌ ಕಲೆಹಾಕಿ ಆಸ್ಟ್ರೇಲಿಯಾಗೆ 149 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿ ಅಫ್ಘಾನಿಸ್ತಾನದ ಮುಂದೆ ಮಂಡಿಯೂರಿದ ಆಸ್ಟ್ರೇಲಿಯಾ 19.2 ಓವರ್‌ಗಳಲ್ಲಿ 127 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು.

ಅಫ್ಘಾನಿಸ್ತಾನ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಹ್ಮನ್ನುಲ್ಲಾ ಗುರ್ಬಝ್‌ 60 (49) ರನ್‌ ಹಾಗೂ ಇಬ್ರಾಹಿಂ ಜದ್ರನ್‌ 51 (48) ರನ್‌ ಬಾರಿಸಿ 118 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ಉತ್ತಮ ಆರಂಭ ಕಟ್ಟಿಕೊಟ್ಟರು. ಬಳಿಕ ಅಫ್ಘಾನ್‌ ವೇಗವಾಗಿ ವಿಕೆಟ್‌ ಕಳೆದುಕೊಂಡಿತು. ಅಜ್ಮತ್‌ಉಲ್ಲಾ ಒಮರ್ಝೈ 2, ಕರೀಮ್‌ ಜನತ್‌ 13, ನಾಯಕ ರಶೀದ್‌ ಖಾನ್‌ 2, ಮೊಹಮ್ಮದ್‌ ನಬಿ 10, ಗುಲ್ಬದಿನ್‌ ನೈಬ್‌ ಗೋಲ್ಡನ್‌ ಡಕ್‌ಔಟ್‌ ಮತ್ತು ನಂಗೆಯಲಿಯಾ ಖಾರೋಟ್‌ ಅಜೇಯ 1 ರನ್‌ ಗಳಿಸಿದರು.

ಆಸ್ಟ್ರೇಲಿಯಾ ಪರ ಪ್ಯಾಟ್‌ ಕಮಿನ್ಸ್‌ 3 ವಿಕೆಟ್‌ ಮತ್ತು ಆಡಂ ಜಂಪಾ 2 ವಿಕೆಟ್‌ ಪಡೆದರು.

ಆಸ್ಟ್ರೇಲಿಯಾ ಇನ್ನಿಂಗ್ಸ್: ತಂಡ ವೇಗವಾಗಿ ಆರಂಭಿಕರ ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಹೊರತುಪಡಿಸಿ ಉಳಿದ ಯಾವ ಆಟಗಾರನೂ ಸಹ ಉತ್ತಮ ಆಟವನ್ನಾಡಲಿಲ್ಲ. ಆರಂಭಿಕರಾದ ಟ್ರಾವಿಸ್‌ ಹೆಡ್‌ ಶೂನ್ಯ ಮತ್ತು ಡೇವಿಡ್‌ ವಾರ್ನರ್‌ ಕೇವಲ 3 ರನ್‌ ಗಳಿಸಿದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ 59 (41) ರನ್‌ ಗಳಿಸಿದರು. ಇನ್ನುಳಿದಂತೆ ನಾಯಕ ಮಿಚೆಲ್‌ ಮಾರ್ಷ್‌ 12, ಮಾರ್ಕಸ್‌ ಸ್ಟಾಯಿನಿಸ್‌ 11, ಟಿಮ್ ಡೇವಿಡ್‌ 2, ಮ್ಯಾಥ್ಯೂ ವೇಡ್‌ 5, ಪ್ಯಾಟ್‌ ಕಮಿನ್ಸ್‌ 3, ಆಸ್ಟನ್‌ ಅಗರ್‌ 2, ಆಡಂ ಜಂಪಾ 9 ಮತ್ತು ಜೋಷ್‌ ಹೇಜಲ್‌ವುಡ್‌ ಅಜೇಯ 5 ರನ್‌ ಕಲೆಹಾಕಿದರು.

ಆಸ್ಟ್ರೇಲಿಯಾ ಆಟಗಾರರನ್ನು ಕಾಡಿದ ಗುಲ್ಬದಿನ್‌ ನೈಬ್‌ 4 ವಿಕೆಟ್, ನವೀನ್‌ ಉಲ್‌ ಹಕ್‌ 3 ವಿಕೆಟ್, ಅಜ್ಮತ್‌ಉಲ್ಲಾ ಒಮರ್ಝೈ, ರಶೀದ್‌ ಖಾನ್‌ ಮತ್ತು ಮೊಹಮ್ಮದ್‌ ನಬಿ ತಲಾ ಒಂದೊಂದು ವಿಕೆಟ್‌ ಪಡೆದರು.

Tags:
error: Content is protected !!