Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಟಿ 20 ವಿಶ್ವ ಕಪ್ : ಭಾರತದ ಗೆಲುವಿಗೆ ಕ್ರಿಕೆಟ್ ಪ್ರೇಮಿಗಳಿಂದ ಸಂಭ್ರಮಾಚರಣೆ

ಮೈಸೂರು : ಟಿ ಟ್ವೆಂಟಿ ವಿಶ್ವಕಪ್  ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನದ ವಿರುದ್ಧ ಭಾರತ ಗೆಲುವಿನ ಜಯಭೇರಿ ಬಾರಿಸಿದ್ದು ಈ ಸಂಬಂಧ ನಗರದ ಚಾಮುಂಡಿಪುರಂ ವೃತ್ತದ ಬಳಿ ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ, ಪರಸ್ಪರ ಸಿಹಿಯನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮವನ್ನು ಆಚರಿಸಿದ್ದರು.

ನಮ್ಮೆಲ್ಲರಿಗೂ ವಿರಾಟ್ ಕೊಹ್ಲಿ ಅವರ ಅಭೂತಪೂರ್ವ ಪ್ರದರ್ಶನ ಗಮನ ಸೆಳೆಯಿತು. ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ದೀಪಾವಳಿಯ ಗೆಲುವಿನ ಮೂಲಕ ಉಡುಗೊರೆಯನ್ನು ನೀಡಿರುವುದು ನಮಗೆ ಸಂತಸದ ವಿಚಾರ ಎಂದು ಕ್ರಿಕೆಟ್ ಪ್ರೇಮಿಗಳು ಹೇಳಿದರು.

ಸಂಭ್ರಮಾಚರಣೆಯಲ್ಲಿ ಬಸವರಾಜ್, ಮಧು ಎನ್ ಪೂಜಾರ್, ಬಸಪ್ಪ, ಜೆಡಿಎಸ್ ಮುಖಂಡರಾದ ಯದುನಂದ, ಅನಿಲ್ ಕುಮಾರ್, ಮಂಜುನಾಥ್, ನಂದೀಶ್, ಹೊಯ್ಸಳ ರಂಗನಾಥ್, ಸುರೇಶ್, ಸುಚೇಂದ್ರ, ನವೀನ್ ಕೆಂಪಿ, ತೀರ್ಥ ಕುಮಾರ್, ಮಂಜಪ್ಪ, ಅಹಿಂದ ನಟರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ