Mysore
23
broken clouds
Light
Dark

ಫೈನಲ್‌ ತಲುಪಿದ ಭಾರತದ ಸ್ಟಾರ್‌ ಶೂಟರ್‌ ಸ್ವಪ್ನಿಲ್‌ ಕುಸಾಲೆ

ಪ್ಯಾರಿಸ್:‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅಮೋಘ ಪ್ರದರ್ಶನ ನೀಡುತ್ತಿದ್ದು, ಇಂದು ಕೂಡ ಭಾರತದ ಕ್ರೀಡಾಪಟುಗಳು ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ.

ಭಾರತದ ಸ್ಟಾರ್‌ ಶೂಟರ್‌ ಸ್ವಪ್ನಿಕ್‌ ಕುಸಾಲೆ 50 ಮೀಟರ್‌ ಏರ್‌ ರೈಫಲ್‌ 3 ಸ್ಥಾನಗಳ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇಂದು ನಡೆದ ಅರ್ಹತಾ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದು ಅಗ್ರ-8ರಲ್ಲಿ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದರು. ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್‌ ಅರ್ಹತಾ ಈವೆಂಟ್‌ನ ಅಗ್ರ ಎಂಟರೊಳಗೆ ಪ್ರವೇಶಿಸಲು ಸಾಧ್ಯವಾಗದೇ ಸ್ಪರ್ಧೆಯಿಂದ ಹೊರಗುಳಿದರು.

ಮೊದಲ 8 ಸ್ಥಾನ ಗಳಿಸಿದ ಕ್ರೀಡಾಪಟುಗಳು ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಸ್ವಪ್ನಿಲ್‌ ಅಂಕಗಳ ವಿಷಯದಲ್ಲಿ ಸ್ಥಿರತೆ ತೋರಿದರು. ಹೀಗಾಗಿ ಪ್ರತಿ ಸರಣಿಯಲ್ಲಿ 99 ಅಂಕಗಳನ್ನು ಗಳಿಸಿದರು. ಹೀಗಾಗಿ ಪ್ರತಿ ಸರಣಿಯಲ್ಲಿ 99 ಅಂಕಗಳನ್ನು ಗಳಿಸಿದರು.

ಬಳಿಕ ಅದ್ಬುತ ಪ್ರದರ್ಶನದಿಂದಾಗಿ ಐಶ್ವರಿ ಅಗ್ರ ಎಂಟರೊಳಗೆ ಎಂಟ್ರಿಕೊಟ್ಟರು. ಈ ಸಂದರ್ಭದಲ್ಲಿ ಸ್ವಪ್ನಿಲ್‌ 13 ಒಳಗಿನ 10 ರಿಂಗ್‌ಗಳೊಂದಿಗೆ 197 ಅಂಕಗಳನ್ನು ಗಳಿಸಿದರು. ವಿಶ್ವ ರ್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ಐಶ್ವರಿ ತಮ್ಮ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ಅಂತಿಮ ಅಂಕಪಟ್ಟಿಯಲ್ಲಿ ಎಡವಿದರು.

ಮೊದಲ 8 ಸ್ಥಾನ ಗಳಿಸಿದ ಕ್ರೀಡಾಪಟುಗಳು ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಸ್ವಪ್ನಿಲ್‌ ಅಂಕಗಳ ವಿಷಯದಲ್ಲಿ ಸ್ಥಿರತೆ ತೋರಿದರು. ಹೀಗಾಗಿ ಪ್ರತಿ ಸರಣಿಯಲ್ಲಿ 99 ಅಂಕಗಳನ್ನು ಗಳಿಸಿದರು. ಸ್ವಪ್ನಿಲ್‌ 13 ಸಂದರ್ಭಗಳಲ್ಲಿ ಒಳಗಿನ 10 ಉಂಗುರಗಳನ್ನು ಹೊಡೆದು 6ನೇ ಸ್ಥಾನ ಪಡೆದರು.

ಬಳಿಕ ಎರಡನೇ ಸರಣಿಯಲ್ಲಿ 98 ಅಂಕ ಗಳಿಸುವ ಮೂಲಕ ಕೊಂಚ ಪುನರಾಗಮನ ಮಾಡಿದ ಐಶ್ವರಿ, ಅರ್ಹತಾ ಈವೆಂಟ್‌ನ ಅಗ್ರ ಎಂಟರೊಳಗೆ ಪ್ರವೇಶಿಸಲು ಈ ಅಂಕಗಳು ಐಶ್ವರಿ ಅವರಿಗೆ ಸಾಕಾಗಲಿಲ್ಲ. ಇದರ ಪರಿಣಾಮವಾಗಿ ಐಶ್ವರಿ ಪಂದ್ಯಾವಳಿಯಿಂದ ಹೊರನಡೆದರು.