ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದ ವೇಳೆ ಪಕ್ಕೆಲುಬಿನ ಗಾಯದಿಂದ ಬಳಲುತ್ತಿರುವ ಭಾರತದ ಏಕದಿನ ತಂಡ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶನಿವಾರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ: ಎಲ್ಲಾ ಮಾದರಿ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ನಿವೃತ್ತಿ ಘೋಷಣೆ
ವರದಿಗಳು ಬಂದ ನಂತರ, ಆಂತರಿಕ ರಕ್ತಸ್ರಾವ ಪತ್ತೆಯಾಗಿದ್ದು, ಅವರನ್ನು ದಾಖಲಿಸಬೇಕಾಯಿತು. ರಕ್ತಸ್ರಾವದಿಂದಾಗಿ ಸೋಂಕು ಹರಡುವುದನ್ನು ನಿಲ್ಲಿಸುವ ಅಗತ್ಯವಿರುವುದರಿಂದ ಚೇತರಿಕೆಯ ಆಧಾರದ ಮೇಲೆ ಅವರು ಎರಡರಿಂದ ಏಳು ದಿನಗಳವರೆಗೆ ವೀಕ್ಷಣೆಯಲ್ಲಿರುತ್ತಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.





