Mysore
29
clear sky

Social Media

ಮಂಗಳವಾರ, 21 ಜನವರಿ 2025
Light
Dark

ರೋಹಿತ್-ಕೊಹ್ಲಿ ವಿಶ್ವಶ್ರೇಷ್ಠ ಆಟಗಾರರು: ಬಾಬರ್ ಆಝಮ್

ಬೆಂಗಳೂರು : ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ವಿಶ್ವ ಶ್ರೇಷ್ಠ ಆಟಗಾರರು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಮ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಸ್ಟಾರ್ ಸ್ಪೋಟ್ರ್ಸ್‍ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಬಲಗೈ ಬ್ಯಾಟರ್ ಗೆ ವಿಶ್ವದ ನಿಮ್ಮ ಅತ್ಯುತ್ತಮ ಕ್ರಿಕೆಟಿಗರ ಹೆಸರನ್ನು ತಿಳಿಸಿ ಎಂದು ಕೇಳಿದಾಗ, ಬಾಬರ್ ಆಝಮ್, ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.

ನಾನು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸ್ ಅವರ ಹೆಸರ ತೆಗೆದುಕೊಳ್ಳಲು ಬಯಸುತ್ತೇನೆ. ಏಕೆಂದರೆ ನಾನು ಅವರ ಆಟವನ್ನು ಅನುಕರಿಸುತ್ತೇನೆ. ಅವರು ವಿಶ್ವದ ಅತ್ಯಂತ ಪರಿಣಾಮಕಾರಿ ಆಟಗಾರರಾಗಿದ್ದಾರೆ. ಅಲ್ಲದೆ ವಿಶ್ವದ ಅತಿ ಶ್ರೇಷ್ಠ ಬ್ಯಾಟರ್ಸ್‍ಗಳಾಗಿದ್ದಾರೆ. ಅವರು ಪಂದ್ಯದ ಸಂಕಷ್ಟದ ಪರಿಸ್ಥಿತಿಯನ್ನು ತುಂಬಾ ಸೂಕ್ಷ್ಮವಾಗಿ ಅದರಿಂದ ಹೇಗೆ ಹೊರಬರಬೇಕೆಂಬುದನ್ನು ತುಂಬಾ ಚೆನ್ನಾಗಿ ಅರಿತುಕೊಂಡಿದ್ದಾರೆ. ಆದ್ದರಿಂದಲೇ ಅವರು ವಿಶ್ವದ ಉತ್ತಮ ಆಟಗಾರರಾಗಿದ್ದಾರೆ’ ಎಂದು ಬಾಬರ್ ಆಝಮ್ ಹೇಳಿದ್ದಾರೆ.

ಅವರ ಬ್ಯಾಟಿಂಗ್ ಶೈಲಿಯನ್ನು ನೋಡಲು ತುಂಬಾ ಸಂತೋಷವಾಗುತ್ತದೆ. ಅಲ್ಲದೆ ಅವರು ತಂಡವು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾಗ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ತಂಡವನ್ನು ಪಾರು ಮಾಡುವ ಗುಣವು ನನಗೆ ತುಂಬಾ ಇಷ್ಟವಾಗಿದೆ’ ಎಂದು ಪಾಕ್ ನಾಯಕ ತಿಳಿಸಿದ್ದಾರೆ.

`ಪಂದ್ಯದಲ್ಲಿ ಬೌಲರ್‍ಗಳು ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿರುವ ಸಂದರ್ಭದಲ್ಲಿ ಒಬ್ಬ ಬ್ಯಾಟ್ಸ್‍ಮನ್‍ಗೆ ರನ್ ಗಳಿಸಲು ತುಂಬಾ ಕಷ್ಟದ ಸಂಗತಿಯಾಗಿರುತ್ತದೆ. ಆದರೆ ಅವರು (ರೋಹಿತ್, ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್) ಇಂತಹ ಸಂದರ್ಭದಲ್ಲಿ ತಮ್ಮ ನೈಜ ಆಟದಿಂದ ಪಾರು ಮಾಡುವ ರೀತಿಯು ನನಗೆ ತುಂಬಾ ಇಷ್ಟವಾಗಿದೆ. ಆದ್ದರಿಂದಲೇ ಅವರು ನನ್ನ ಪ್ರಕಾರ ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದಾರೆ’ ಎಂದು ಬಾಬರ್ ಆಝಮ್ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ