ಪ್ಯಾರಿಸ್: ಇಲ್ಲಿ ನಡೆಯುತ್ತಿರುವ 2024ರ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ರಿತಿಕಾ ಹೂಡಾ ಅವರು ಮಹಿಳೆಯರ ಕುಸ್ತಿ 76 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸೆಮಿ ಫೈನಲ್ಸ್ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
ಕ್ವಾರ್ಟರ್ ಫೈನಲ್ಸ್‌ನಲ್ಲಿ ಕಿರ್ಗಿಸ್ತಾನ್‌ನ ಐಪೆರಿ ಮೆಡೆಟ್ ಕಿಝಿ ವಿರುದ್ಧ 1-1 ಅಂಕಗಳ ಸಮಬಲದೊಂದಿಗೆ ಹೋರಾಟ ಮಾಡಿದ್ದರ ಹೊರತಾಗಿಯೂ ರಿತಿಕಾ ಹೂಡಾ ಸೋಲನುಭವಿಸಿದರು.
ಈ ಇಬ್ಬರು ಕುಸ್ತಿಪಟುಗಳು ಸಮಬಲ ಸಾಧಿಸಿದರು. ಆರು ನಿಮಿಷಗಳ ನಿರಂತರ ಕಾದಾಟ ಬಳಿಕ ಕುಸ್ತಿ ನಿಯಮದ ಅನ್ವಯ ಮೆಡೆಟ್ ಗೆಲುವು ಸಾಧಿಸಿ ಸೆಮಿಸ್‌ಗೆ ಅರ್ಹತೆ ಪಡೆದುಕೊಂಡರು.
ಸೆಮಿಸ್‌ನಲ್ಲಿ ಮೆಡೆಟ್ ಗೆದ್ದು, ಫೈನಲ್ಸ್ ತಲುಪಿದರೆ, ರಿತಿಕಾ ಅವರಿಗೆ ರೆಪಷಾಚ್ ನಿಯಮದಡಿ ಸ್ಪರ್ಧಿಸುವ ಮತ್ತೊಂದು ಅವಕಾಶ ಸಿಗಲಿದೆ.