Mysore
25
overcast clouds
Light
Dark

ಈ ಕಾರಣದಿಂದಲೇ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದೆ: ಸತ್ಯ ಬಿಚ್ಚಿಟ್ಟ ಎಬಿಡಿ!

ಜೋಹಾನ್ಸ್‌ ಬರ್ಗ್‌ : ಮಿಸ್ಟರ್‌ ೩೬೦ ಎಂಬ ಖ್ಯಾತಿಯೊಂದಿಗೆ ಇಡೀ ಕ್ರಿಕೆಟ್‌ ಜಗತ್ತಿಗೆ ಚಿರಪರಿಚಿತರಾದವರು ಸೌಥ್‌ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌. ಹರಿಣ ನಾಯಕ ಎಬಿಡಿ ೨೦೧೮ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿ ಹೊಂದಿದ್ದರು. ಬಳಿಕ ಟಿ೨೦ ಲೀಗ್‌, ಪ್ರಾಂಚೈಸಿ ತಂಡಗಳಲ್ಲಿ ಆಡುವುದನ್ನು ಮುಂದುವರೆಸಿದ್ದರು. ಐಪಿಎಲ್‌ ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡುತ್ತಿದ್ದ ಮಿಸ್ಟರ್‌ ೩೬೦, ೨೦೨೨ ರಲ್ಲಿ ಐಪಿಎಲ್‌ ನಿಂದಲೂ ದೂರವಾಗಿದ್ದರು.

ತಾವು ಕಳೆದೆರೆಡು ವರ್ಷಗಳಿಂದ ಕ್ರಿಕೆಟ್‌ ಆಡುವುದನ್ನು ನಿಲ್ಲಿಸಿರುವ ಕುರಿತು ಈಗ ಮನಬಿಚ್ಚಿ ಮಾತನಾಡಿರುವ ಎಬಿ ಡಿ ವಿಲಿಯರ್ಸ್‌ ಅವರು ಇದೇ ಕಾರಣಕ್ಕಾಗಿ ತಾವು ಕ್ರಿಕೆಟ್‌ನಿಂದ ದೂರವಾಗಿದ್ದಾಗಿ ಅವರು ತಿಳಿಸಿದ್ದಾರೆ.

ಕಳೆದ ೨ ವರ್ಷಗಳಿಂದ ನನ್ನ ವೃತ್ತಿ ಜೀವನದಲ್ಲಿ ದೃಷ್ಠಿಮಾಂದ್ಯತೆಯೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ ಆಡುತ್ತಿದ್ದೇನೆ. ಇದರಿಂದಾಗಿಯೇ ಕ್ರಿಕೆಟ್‌ ಜೀವನದಿಂದ ಬೇಗ ನಿವೃತ್ತಿ ಪಡೆದುಕೊಂಡೆ ಎಂದು ದಕ್ಷಿಣ ಆಫ್ರಿಕಾ ತಂಡದ ಆಟಗಾರ ಎಬಿ ಡಿ ವಿಲಿಯರ್ಸ್‌ ತಾವು ಕ್ರಿಕೆಟ್‌ ತೊರೆಯಲು ನಿಜವಾದ ಕಾರಣವನ್ನು ತಿಳಿಸಿದ್ದಾರೆ.

ʼwisden cricket monthlyʼ ಪತ್ರಿಕೆಯೊಂದಿಗೆ ಮಾತನಾಡಿರುವ ಎಬಿಡಿ, ನನ್ನ ಕಿರಿಯ ಪುತ್ರ ಆಕಸ್ಮಿಕವಾಗಿ ನನ್ನ ಕಣ್ಣಿಗೆ ಒದ್ದಿದ್ದರಿಂದ ನನ್ನ ಕಣ್ಣುಗುಡ್ಡೆ ಹೊರಬಂದು ನಾನು ದೃಷ್ಠಿಮಾಂದ್ಯತೆಗೆ ಒಳಗಾದೆ. ಇದರಿಂದಾಗಿ ನನ್ನ ಬಲಗಣ್ಣು ದೃಷ್ಠಿಯನ್ನು ಕಳೆದುಕೊಳ್ಳಲು ಆರಂಭಿಸಿತು. ಕೇವಲ ಒಂದೇ ಕಣ್ಣಿನಲ್ಲಿ ಕ್ರಿಕೆಟ್‌ ಆಡಬೇಕಾಯಿತು ಎಂದು ನೈಜ್ಯ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ನನಗೆ ಶಸ್ತ್ರಚಿಕಿತ್ಸೆ ಮುಗಿದ ನಂತರ, ‘ಈ ಸ್ಥಿತಿಯಲ್ಲಿ ನೀವು ಜಗತ್ತಿನಲ್ಲಿ ಹೇಗೆ ಕ್ರಿಕೆಟ್ ಆಡುತ್ತೀರಿ?’ ಎಂದು ವೈದ್ಯರು ಪ್ರಶ್ನಿಸಿದರು. ಆದರೆ, ಅದೃಷ್ಟವಶಾತ್ ನನ್ನ ಎಡಗಣ್ಣು ಕಳೆದ ಎರಡು ವರ್ಷಗಳ ವೃತ್ತಿ ಜೀವನದಲ್ಲಿ ಯೋಗ್ಯವಾಗಿಯೇ ಕೆಲಸ ಮಾಡಿತು” ಎಂದೂ ಅವರು ತಿಳಿಸಿದ್ದಾರೆ.

ಇದಲ್ಲದೆ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದನ್ನು ಹಿಂಪಡೆಯದಿರುವಲ್ಲಿ ಕೋವಿಡ್ ಕೂಡಾ ಪ್ರಮುಖ ಪಾತ್ರ ವಹಿಸಿತು. ೨೦೧೫ ರ ವಿಶ್ವಕಪ್ ಸೆಮಿಫೈನಲ್ ನಲ್ಲಿನ ಸೋಲು ನನಗೆ ಭಾರಿ ನೋವುಂಟು ಮಾಡಿತು ಹಾಗೂ ಅದರಿಂದ ಚೇತರಿಸಿಕೊಳ್ಳಲು ನನಗೆ ಸಾಕಷ್ಟು ಸಮಯ ಹಿಡಿಯಿತು ಎಂದು ಬಹಿರಂಗಪಡಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ