ಪ್ಯಾರಿಸ್: ಭಾರತದ ಪ್ರಮುಖ ಷಟ್ಲರ್ ಖ್ಯಾತಿಯ ಪಿವಿ ಸಿಂಧು ಅವರ ಮೂರನೇ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ನುಚ್ಚುನೂರಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಚೀನಾದ ಷಟ್ಲರ್ ಹೀ ಬಿಂಗ್ ಝಾವೋ ವಿರುದ್ಧ ಪಿವಿ ಸಿಂಧು ಹೀನಾಯ ಸೋಲನುಭವಿಸುವ ಮೂಲಕ ತಮ್ಮ ಅಭಿಯಾನವನ್ನು ಮುಗಿಸಿದ್ದಾರೆ.
ಸಿಂಧು ಎದುರು 19-21, 14-21 ಅಂತರದಲ್ಲಿ ಬಿಂಗ್ ಝಾವೋ ಗೆಲುವು ಸಾಧಿಸಿದರು. ಸತತ ಎರಡು ಸೆಟ್ಗಳಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಝಾವೊ ಅವರು ಭರ್ಜರಿ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ಸ್‌ಗೆ ಲಗ್ಗೆ ಇಟ್ಟರು.
ಇನ್ನು ಕಳೆದ ಎರಡು ಭಾರಿ ರಿಯೊ ಡಿ ಜನೈರೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದ ಪಿವಿ ಸಿಂಧು ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿ ಕನಸನ್ನು ಭಗ್ನಗೊಳಿಸಿಕೊಂಡಿದ್ದಾರೆ.