ಪ್ಯಾರಿಸ್: ಇಲ್ಲಿ ನಡೆಯುತ್ತಿರುವ 2024ರ ಪ್ಯಾರಾಲಿಂಪಿಕ್ಸ್‌ನ ಎರಡನೇ ದಿನವಾದ ಇಂದು ಭಾರತಕ್ಕೆ ಪದಕಗಳ ದಿನವಾಗಿದೆ. 100ಮೀ ಓಟದ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ಪ್ರೀತಿ ಪಾಲ್ ಅವರು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಆ ಮೂಲಕ ಭಾರತಕ್ಕೆ ಒಂದೇ ದಿನದಲ್ಲಿ ಮೂರನೇ ಪದಕ ಒಲಿದಿದೆ.
ಮಹಿಳೆಯರ 100 ಮೀ ಟಿ-35 ಫೈನಲ್ಸ್‌ಗೆ ಸ್ಥಾನ ಖಚಿತಪಡಿಸಿಕೊಂಡ ಇವರು ಬಳಿಕ ಕಂಚಿನ ಪದಕ ಗೆದ್ದು ಬೀಗಿದರು. ಫೈನಲ್ಸ್‌ನಲ್ಲಿ ಅವರು 100 ಮೀ ಅನ್ನು 14.21 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಟ್ರ್ಯಾಕ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾದರು.
ಇಂದು ಒಂದೇ ದಿನ ಭಾರತಕ್ಕೆ ಮೂರು ಪದಕ: 100ಮೀ ಓಟದ ಸ್ಪರ್ಧೆಯಲ್ಲಿ ಪ್ರೀತಿಪಾಲ್ ಅವರು ಕಂಚಿನ ಪದಕ ಗೆದ್ದು ಒಂದೇ ದಿನ ಮೂರು ಪದಕ ಜಯಿಸಲು ಸಹಕರಿಸಿದರು. 10 ಮೀ ಏರ್ ರೈಫಲ್ಸ್ ಎಚ್‌ಎಸ್-1 ಸ್ಪರ್ಧೇಯಲ್ಲಿ ಅವನಿ ಲೇಖರ ಚಿನ್ನ, ಮೋನಾ ಅಗರ್ವಾಲ್ ಅವರು ಕಂಚಿನ ಪದಕ ಗೆದ್ದು ಬೀಗಿದ್ದರು.