Mysore
28
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

PKL2023: ದಬಾಂಗ್‌ ಡೆಲ್ಲಿ ವಿರುದ್ಧ ಸೋತ ಬೆಂಗಳೂರು ಬುಲ್ಸ್‌

ಬೆಂಗಳೂರು : ಪ್ರೊ ಕಬಡ್ಡಿ ಲೀಗ್‌ನ ದಬಾಂಗ್‌ ಡೆಲ್ಲಿ ಮತ್ತು ಬೆಂಗಳೂರು ಬುಲ್ಸ್‌ ನಡುವಿನ ಪಂದ್ಯದಲ್ಲಿ ದಬಾಂಗ್‌ ದೆಲ್ಲಿ ಜಯಭೇರಿ ಬಾರಿಸಿದೆ.

ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ೭ ಪಾಯಿಂಟ್‌ಗಳ ಅಂತರದಿಂದ ಗೆಲುವು ದಾಖಲಿಸಿತು. ಈ ಪಂದ್ಯ ಸೋತ ಬೆಂಗಳೂರು ಬುಲ್ಸ್‌ ಈ ಟೂರ್ನಿಯಲ್ಲಿ ಸತತ ಮೂರನೇ ಸೋಲು ಕಂಡಿತು.

ದಬಾಂಗ್‌ ಡೆಲ್ಲಿ ಪರ ಆಲ್‌ರೌಂಡರ್‌ ಆಟವಾಡಿದ ನವೀನ್‌ ಕುಮಾರ್‌ ರೈಡ್‌ ಪಾಯಿಂಟ್‌ ೭, ಟ್ಯಾಕಲ್‌ ೧ ಮತ್ತು ಬೋನಸ್‌ ೫ ಪಾಯಿಂಟ್‌ ಸೇರಿ ೧೩ ಅಂಕ ಗಳಿಸಿಕೊಟ್ಟರು. ಅಶು ಮಲ್ಲಿಕ್‌ ೧೦ ಪಾಯಿಂಟ್ಸ್‌ ಗಳಿಸಿ ನವೀನ್‌ ಕುಮಾರ್‌ಗೆ ನೆರವಾದರು. ಇನ್ನು ವಿಶಾಲ್‌ ಭಾರದ್ವಜ್‌ ೪ ಮತ್ತು ಹಿಮ್ಮತ್‌ ೩ ಪಾಯಿಂಟ್‌ ಗಳಿಸಿದರು.

ಬೆಂಗಳೂರು ಬುಲ್ಸ್‌ ಪರ ಭರತ್‌ ೧೦ ಏಕಾಂಗಿ ಹೋರಾಟ ನಡೆಸಿದರು. ಸುಶೀಲ್‌ ೫, ಅಮನ್‌ ೩ ಮತು ಅಕ್ಷಿತ್‌ ದುಲ್‌ ೩ ಪಾಯಿಂಟ್‌ ತಂದರು.

ಮೊದಲಾರ್ದದಲ್ಲೇ ಮುನ್ನಡೆ ಕಾಯ್ದುಕೊಂಡ ಡೆಲ್ಲಿ ತಂಡ ಅಲ್ಲಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಬುಲ್ಸ್‌ಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಬಿಡದ ಡೆಲ್ಲಿ ತಂಡ ಅಂತಿಮವಾಗಿ ೩೮-೩೧ ಅಂತರದಿಂದ ಬೆಂಗಳೂರು ಬುಲ್ಸ್‌ ವಿರುದ್ಧ ದಬಾಂಗ್‌ ಡೆಲ್ಲಿ ಗೆದ್ದು ಬೀಗಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ