Mysore
23
overcast clouds

Social Media

ಗುರುವಾರ, 17 ಜುಲೈ 2025
Light
Dark

Paris Olympics 2024: ಒಲಂಪಿಕ್ಸ್‌ನಲ್ಲಿ ಹಿಜಾಬ್‌ ನಿಷೇಧ; ಧನಿ ಎತ್ತಿದ ಬಾಕ್ಸರ್‌ ರಹೀಮಿ

ಪ್ಯಾರಿಸ್‌: ಪ್ರತಿಷ್ಠಿತ ಪ್ಯಾರಿಸ್‌ ಒಲಂಪಿಕ್ಸ್‌ ಕ್ರೀಡಾಕೂಟದಲ್ಲಿ ಹಿಜಾಬ್‌ ಸದ್ದು ಮಾಡುತ್ತಿದ್ದು, ಈ ಬಾರಿಯ ಇಲಂಪಿಕ್ಸ್‌ನಲ್ಲಿ ಹಿಜಾಬ್‌ ನಷೇಧಿಸಿದ್ದಕ್ಕಾಗಿ ಪ್ಯಾರಿಸ್‌ ಸರ್ಕಾರದ ವಿರುದ್ಧ ಮಾನವ ಹಕ್ಕುಗಳು, ಕ್ರೀಡಾಪಟುಗಳು, ತರಬೇತಿದಾರರು ಗರಂ ಆಗಿದ್ದಾರೆ.

ಹಿಜಾಬ್‌ ನಿಷೇಧ ಒಲಂಪಿಕ್ಸ್‌ನ ಸ್ವಾತಂತ್ರ್ಯ ಹಾಗೂ ಸಮಾನತೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಪ್ಯಾರಿಸ್‌ ಸರ್ಕಾರದ ನಡೆ ವಿರುದ್ಧ ಟೀಕೆಗಳು ವ್ಯಕ್ತವಾಗಿದೆ.

ಈ ಬಗ್ಗೆ ಮಾತನಾಡಿರು ಆಸ್ಟ್ರೇಲಿಯನ್‌ ಬಾಕ್ಸರ್‌ ಟೀನಾ ಹರೀಮಿ, ಹಿಜಾಬ್‌ನ್ನು ನನ್ನ ಧರ್ಮದ ಒಂದು ಭಾಗವಾಗಿ ನೋಡುತ್ತೇನೆ. ಹಾಗೆ ಅದನ್ನು ಆಚರಣೆ ಮಾಡಲು ನನಗೆ ಹೆಮ್ಮೆ ಇದೆ. ಕ್ರೀಡೆಯಲ್ಲಿ ಈ ರೀತಿ ಕ್ರಮ ಕೈಗೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆಗೆ ಪುಷ್ಠಿ ನೀಡುವಂತೆ ಉಳಿದ ಎಲ್ಲಾ ಮುಸ್ಲಿಂ ಕ್ರೀಡಾಪಟುಗಳು ಹಿಜಾಬ್‌ ಬ್ಯಾನ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇತ್ತ ಹಿಜಾಬ್‌ ಬ್ಯಾನ್‌ ವಿಷಯವನ್ನು ಸಮರ್ಥಿಸಿಕೊಂಡಿರುವ ಫ್ರಾನ್ಸ್‌ ಕ್ರೀಡಾ ಸಚಿವ ಅಮೇಲಿ ಕ್ಯಾಸ್ವರಾ, ಕ್ರೀಡಾಕೂಟದಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಲು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜ್ಯಾತ್ಯಾತೀತತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

Tags:
error: Content is protected !!