Mysore
20
overcast clouds
Light
Dark

ವಿನೇಶ್‌ ಫೋಗಟ್‌ಗೆ ಮತ್ತೆ ಹಿನ್ನಡೆ: ಬೆಳ್ಳಿ ತೀರ್ಪು ಆಗಸ್ಟ್.‌16ಕ್ಕೆ ಮುಂದೂಡಿಕೆ

ಪ್ಯಾರಿಸ್:‌ ಭಾರತೀಯ ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಸಲ್ಲಿಸಿರುವ ಮೇಲ್ಮನವಿ ಮೇಲಿನ ತೀರ್ಪನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ ಮತ್ತೆ ಮುಂದಕ್ಕೆ ಹಾಕಿದೆ.

ಭಾರತೀಯ ಕಾಲಮಾನ ಇಂದು ರಾತ್ರಿ ತೀರ್ಪು ಪ್ರಕಟವಾಗಬೇಕಿತ್ತು. ಆದರೆ ಈಗ ಆಗಸ್ಟ್.‌16ರಂದು ತೀರ್ಪು ನೀಡುವುದಾಗಿ ಪ್ರಕಟಿಸಿದೆ.

ನಿಗದಿಗಿಂತ 100 ಗ್ರಾಂ ತೂಕ ಹೊಂದಿದ್ದಕ್ಕೆ ಫೋಗಟ್‌ ಅವರನ್ನು ಪ್ಯಾರಿಸ್‌ ಒಲಿಂಪಿಕ್ಸ್‌ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆಜಿ ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು.

ಈ ವೇಳೆ ವಿನೇಶ್‌ ಫೋಗಟ್‌ ಆಗಸ್ಟ್.‌9ರಂದು ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಮನವಿಯನ್ನು ಆಲಿಸಿದ್ದ ಸಿಎಎಸ್‌ ಮೂರನೇ ಬಾರಿಗೆ ತೀರ್ಪು ಪ್ರಕಟಿಸಲು ಮುಂದೂಡಿಕೆ ಮಾಡಿದ್ದು, ಆಗಸ್ಟ್.‌16ರಂದು ತೀರ್ಪು ಪ್ರಕಟ ಮಾಡುವುದಾಗಿ ಹೇಳಿದೆ.

ವಿನೇಶ್‌ ಫೋಗಟ್‌ ಪರವಾಗಿ ಖ್ಯಾತ ವಕೀಲ ಹರೀಶ್‌ ಸಾಳ್ವೆ ಮತ್ತು ವಿದುಷ್ಪತ್‌ ಸಿಂಘಾನಿಯಾ ಅವರು ಇಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.