ಪ್ಯಾರಿಸ್: ಮಂಗಳವಾರ ಇಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಚಾಂಪಿಯನ್ ಜೀವಂಜಿ ದೀಪ್ತಿ ಅವರು ಮಹಿಳೆಯರ 400 ಮೀಟರ್ ಟಿ20 ವಿಭಾಗದ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
55.82ಸೆಕೆಂಡುಗಳಲ್ಲಿ ಗುರಿ ತಲುಪಿದ ಜೀವಂಜಿ ದೀಪ್ತಿ, ಉಕ್ರೇನ್‌ನ ಯೂಲಿಯಾ ಶುಲಿಯಾರ್(55.16) ಮತ್ತು ವಿಶ್ವದಾಖಲೆ ಹೊಂದಿರುವ ಟರ್ಕಿಯ ಐಸೆಲ್ ಒಂಡರ್(55.23)ಅವರನ್ನು ಹಿಂದಿಕ್ಕಿ, ನಿಗದಿತ ಗುರಿ ತಲುಪಿ ಪದಕ ಪಡೆದರು. ಈ ಮೂಲಕ ಭಾರತಕ್ಕೆ ಪಾರಾಲಿಂಪಿಕ್ಸ್‌ನ ಪದಕಗಳ ಪಟ್ಟಿ 16ಕ್ಕೇರಿದೆ.