ಪ್ಯಾರಿಸ್: ಇಲ್ಲಿ ಮಂಗಳವಾರ ನಡೆದ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ ಶಾಟ್‌ಪುಟ್‌ನಲ್ಲಿ(ಎಫ್34) ಭಾರತದ ಭಾಗ್ಯಶ್ರೀ ಜಾಧವ್ ಐದನೇ ಸ್ಥಾನ ಪಡೆದರು.
ಭಾಗ್ಯಶ್ರೀ ಜಾಧವ್ ಅವರು ಶಾಟ್‌ಪುಟ್‌ನಲ್ಲಿ 7.28 ಮೀ ದೂರು ಎಸೆದರು. ಆದರೆ, ಇದು ಪದಕ ಗೆಲ್ಲಲು ನೆರವಾಗಲಿಲ್ಲ.
9.14ಮೀ ದೂರು ಎಸೆಯುದರೊಂದಿಗೆ ಚೀನಾದ ಲಿಜುವಾನ್ ಝೌ ಚಿನ್ನ ಗೆದ್ದರೆ, 8.33ಮೀ ದೂರು ಎಸೆದು ಪೋಲೆಂಡ್‌ನ ಲೂಸಿನಾ ಕಾರ್ನೋಬಿಸ್ ಬೆಳ್ಳಿ ಪದಕ ಪಡೆದುಕೊಂಡರು.