ಅಹಮದಾಬಾದ್ : ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಫೈನಲ್ ನಲ್ಲಿ ಕಾದಾಟ ನಡೆಸಲಿದ್ದು, ಸತತ ಎರಡು ದಶಕಗಳ ನಂತರ ಇತ್ತಂಡಗಳು ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಐಸಿಸಿ ಏಕದಿನ ವಿಶ್ವಕಪ್-2023 ಅಂತಿಮ ಘಟ್ಟ ತಲುಪಿದೆ. ಮೊದಲ ಸೆಮಿಸ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆದ್ದು ಫೈನಲ್ ಪ್ರವೇಶಿಸಿದರೆ, ಎರಡನೆ ಸೆಮಿಸ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಫೈನಲ್‌ಗೆ ಆಸ್ಟ್ರೆಲಿಯಾ ಪ್ರವೇಶ ಪಡೆದಿದೆ.
ಅತಿಥೇಯ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ನ.19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಮದ್ಯಾಹ್ನ 2.00 ಗಂಟಗೆ ಪ್ರಶಸ್ತಿಗಾಗಿ ಸೆಣೆಸಾಡಲಿವೆ.
ಮೂರು ಬಾರಿ ಫೈನಲ್ ತಲುಪಿರುವ ಭಾರತ 2 ಬಾರಿ ವಿಶ್ವಕಪ್ ಎತ್ತಿ ಹಿಡಿದಿರೆ, 7ಬಾರಿ ಫೈನಲ್ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡ 5 ಬಾರಿ ಟ್ರೋಫಿ ಗೆದ್ದಿದೆ.
ದ. ಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ ನಡೆದ 2003ರ ವಿಶ್ವಕಪ್ ಫೈನಲ್ ಹಣಾಹಣೆಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಭಾರತ ಎದುರಿಸಿತ್ತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸೌರವ್ ಗಂಗೂಲಿ ಪಡೆ, ರಿಕ್ಕಿ ಪಾಂಟಿಂಗ್ ಅವರ ಆಕರ್ಷಕ ಶತಕ (140) ನೆರವಿನಿಂದ ಆಸ್ಟ್ರೇಲಿಯಾ ತಂಡ 360 ರನ್‌ಗಳ ಬೃಹತ್ ಗುರಿಯನ್ನು ನೀಡಿತು.
ಇತ್ತ ಆಸ್ಟ್ರೇಲಿಯಾ ನೀಡಿದ್ದ ಗುರಿ ಬೆನ್ನಟ್ಟಿದ ಭಾರತ 39.2 ಓವರಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 234 ರನ್ ಗಳಿಸಲಷ್ಟೇ ಸಕ್ತವಾಯಿತು. ಆಮೂಲಕ ಫೈನಲ್ ಪಂದ್ಯದಲ್ಲಿ 125ರನ್‌ಗಳಿಂದ ಪರಾಭವಗೊಂಡು ಟ್ರೋಫಿ ಕನಸು ಭಗ್ನಗೊಂಡಿತು.
ಟೀಂ ಇಂಡಿಯಾ ಪರ ಬಿರುಸಿ ಹೊಡೆತಗಾರ ವಿರೇಂದ್ರ ಸೆಹ್ವಾಗ್ 84 ರನ್ ಗಳಿಸಿದ್ದೇ ಅತಿಹೆಚ್ಚು, ಮಾಸ್ಟರ್ ಬ್ಲಾಸ್ಟರ್ ಕೇವಲ 4 ರನ್‌ಗೆ ನಿರ್ಮಿಸಿದರೆ, ನಾಯಕ ಸೌರವ್ ಗಂಗೂಲಿ 24 ರನ್ ಗಳಿಸಿ ಮರಳಿದರು. ತಂಡಕ್ಕೆ ಚೇತರಿಕೆ ಆಟವಾಡಿದ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವೀಡ್ 47 ರನ್‌ಗಳಿಸಿದರು, ಯುವರಾಜ್ ಸಿಂಗ್ 24ರನ್ ಗಳಿಸಿ ಪೆವಿಲಿಯನತ್ತ ಹೆಜ್ಜೆ ಹಾಕಿದರು.
ಭಾರತ ಪರ ಹರಭಜನ್ ಸಿಂಗ್ 2 ವಿಕೆಟ್ ಪಡೆದರು. ಆಸ್ಟ್ರೇಲಿಯಾ ಪರ ಮೆಗ್ರಾಥ್ 3, ಬ್ರೆಟ್ ಲೀ 2 ಹಾಗೂ ಆಲ್‌ರೌಂಡರ್ ಸೈಮಂಡ್ಸ್ 2 ವಿಕೆಟ್ ಪಡೆದರು.
ಇಂಡಿಯಾ-ಆಸ್ಟ್ರೇಲಿಯಾ ವರ್ಲ್ಡ್ ಕಪ್ ಮುಖಾಮುಖಿ:
ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಇದುವರೆಗೆ 13 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಕೇವಲ 5 ಬಾರಿ ಜಯ ಗಳಿಸಿದೆ. ಭಾರತ ಮೇಲೆ ಪಾರುಪತ್ಯ ಸಾಧಿಸಿರುವ ಆಸೀಸ್ 8 ಪಂದ್ಯಗಳಲ್ಲಿ ಜಯ ದಾಖಲಿಸಿದೆ.
ನ.19 ರಂದು ನಡೆಯುವ ಪಂದ್ಯದ ನಿರ್ಣಾಯಕ ಹಂತದಲ್ಲಿದ್ದು, ಗೆದ್ದ ತಂಡ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ. 2015ರ ವರ್ಲ್ಡ್ ಕಪ್ ಸೆಮಿಸ್‌ನಲ್ಲಿ ಮುಖಾಮುಖಿಯಾಗಿದ್ದು, ಆಸೀಸ್ ಗೆಲುವು ದಾಖಲಿಸಿತ್ತು.