ಪ್ಯಾರಿಸ್: ವಿಶ್ವವಿಖ್ಯಾತ ಕ್ರೀಡಾಕೂಟ ಒಲಂಪಿಕ್ಸ್‌ನಲ್ಲಿ 100 ಮೀ ಓಟದಲ್ಲಿ ರೋಚಕ ಹಣಾಹಣೆಯೊಂದಿಗೆ ಅಮೇರಿಕಾದ ನೊವಾ ಲೈಲ್ಸ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಅತ್ಯಂತ ರೋಚಕ ಹಣಾಹಣೆಗೆ ಹೆಸರುವಾಸಿಯಾಗಿದ್ದ ಈ ಓಟದಲ್ಲಿ ಇಬ್ಬರು ಪ್ರತಿಸ್ಪರ್ಧಿಗಳು ಒಂದೇ ಸಮಯದಲ್ಲಿ ಓಟವನ್ನು ಮುಗಿಸಿದರು ಸಹಾ ಅಮೇರಿಕದ ನೊವಾ ಲೈಲ್ಸ್ ಪ್ರಥಮ ಸ್ಥಾನ ಪಡೆದು ಗೆದ್ದು ಬೀಗಿದರು.
ಜಮೈಕಾದ ಕಿಶಾನೆ ಥಾಮಸ್ ಹಾಗೂ ಅಮೇರಿಕಾದ ನೊವಾ ಲೈಲ್ಸ್ ಇಬ್ಬರೂ ಸಹಾ 9.79 ಸೆಕೆಂಡುಗಳಲ್ಲಿ ನೂರು ಮೀ. ಕ್ರಮಿಸಿದರು. ಆದರೆ ಜಮೈಕಾದ ಥಾಮಸ್ ಗಿಂತ ನೊವಾ ಲೈಲ್ಸ್ 0.005 ಸೆಕೆಂಡ್‌ಗಳ ಮುನ್ನಡೆ ಸಾಧಿಸುವ ಮೂಲಕ ಪದಕ ತಮ್ಮದಾಗಿಸಿಕೊಂಡರು.
ಮೂವರು ಆಟಗಾರರು ಒಂದೇ ಬಾರಿಗೆ ಗುರಿ ಮುಟ್ಟಿದರು. ಇದರಿಂದಾಗಿ ತೀರ್ಪುಗಾರರು ವೀಡಿಯೋ ಮೊರೆ ಹೋದರು. ವೀಡಿಯೋದಲ್ಲಿ ಅಮೇರಿಕಾದ ಲೈಲ್ಸ್ 9.784 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದು 2004ರ ಬಳಿಕ 100 ಮೀ ನಲ್ಲಿ ಚಿನ್ನ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇನ್ನು ಥಾಮಸ್ 9.789 ಸೆಕೆಂಡುಗಳಲ್ಲಿ ಗುರಿ ಮುಟ್ಟು ಬೆಳ್ಳಿ ಪದಕ ಗೆದ್ದರು. ಇನ್ನು ಅಮೇರಿಕದ 9.81 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದರು.