Mysore
22
broken clouds
Light
Dark

ಅಫ್ಘಾನ್‌ ವಿರುದ್ದ ಗೆದ್ದು ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದ ನ್ಯೂಜಿಲ್ಯಾಂಡ್‌

ಚೆನ್ನೈ: ನ್ಯೂಜಿಲ್ಯಾಂಡ್‌ ಮೈಂಡ್‌ಗೇಮ್‌ ಮುಂದೆ ಮಂಕಾದ ಕ್ರಿಕೆಟ್‌ ಶಿಶು ಅಫ್ಘಾನಿಸ್ತಾನ 169 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.

ಇಲ್ಲಿನ ಚೆಪಾಕ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಫ್ಘಾನಿಸ್ತಾನ ಮಂಡಿಯೂರಿದೆ.

289 ರನ್ ಗುರಿ ಬೆನ್ನಟ್ಟಿದ ಆಫ್ಘಾನ್‌ 34.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 139ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ನ್ಯೂಜಿಲ್ಯಾಂಡ್‌ 149ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದು ಈ ಟೂರ್ನಿಯ ಸತತ ನಾಲ್ಕನೇ ಗೆಲುವಾಗಿದೆ.

ಆರಂಭಿಕರಾಗಿ ಬ್ಯಾಟಿಂಗ್‌ ಇಳಿದ ಗುರ್ಬಾಜ್‌ (11) ಗಳಿಸಿ ಮ್ಯಾಟ್‌ ಹೆನ್ರಿಗೆ ವಿಕೆಟ್‌ ಒಪ್ಪಿಸಿದರು. ಆಮೂಲಕ ತಂಡದ ಪತನ ಆರಂಬವಾಯಿತು. ಜರ್ದಾನ್‌ (14), ರಹಮತ್‌ ಷಾ (36) ಹೊರತುಪಡಿಸಿ ಬೇರಾರಿಂದಲೂ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ.  ಓಮರ್‌ಝೈ (27) ಮತ್ತು ಇಕ್ರಾಮ್‌ ಔಟಾಗದೇ (19) ಸ್ವಲ್ಪ ಹೋರಾಟ ನಡೆಸಿದರು ನ್ಯೂಜಿಲ್ಯಾಂಡ್‌ ದಾಳಿ ಮುಂದೆ ಮಂಕಾದರು. ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 139ರನ್‌ ಕಲೆಹಾಕಿ ಸೋಲೋಪ್ಪಿಕೊಂಡರು.

ಇತ್ತಾ ಉತ್ತಮ ಮತ್ತು ಸಂಘಟಿತ ಬೌಲಿಂಗ್‌ ಪ್ರದರ್ಶನ ನೀಡಿದ ನ್ಯೂಜಿಲ್ಯಾಂಡ್‌ ಪರವಾಗಿ ಲುಕಿ ಫರ್ಗುಸನ್‌ 7-19-3, ಸ್ಯಾಂಟ್ನರ್‌ 7.4-39-3, ಟ್ರೆಂಟ್‌ ಬೌಲ್ಟ್‌ 7-18-2, ಮ್ಯಾಟ್‌ ಹೆನ್ರಿ ಹಾಗೂ ರಚಿನ್‌ ರವೀಂದ್ರ ತಲಾ 1 ವಿಕೆಟ್‌ ಪಡೆದರು.

ಟಾಸ್‌ ಸೋತು ಬ್ಯಾಟ್‌ ಮಾಡಿದ ಕಿವೀಸ್‌ ಬ್ಯಾಟರ್ ಡೇವೂನ್ ಕಾನ್ವೇ 20 ರನ್ ಗಳಿಸಿ ಮುಜೀಬ್ ಬೌಲಿಂಗ್ ನಲ್ಲಿ ಔಟ್ ಆದರು.

ನಾಯಕ ಕೇನ್ ವಿಲಿಯಮ್ಸನ್ ಬದಲಿಗೆ ಆಡುವ 11 ರ ಬಳಗದಲ್ಲಿ ಕಾಣಿಸಿಕೊಂಡ ವಿಲ್ ಯಂಗ್ 4 ಬೌಂಡರಿ 3 ಸಿಕ್ಸರ್ ಸಹಿತ 54 ರನ್ ಬಾರಿಸಿದರು. 110 ರನ್ ಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟ ಕ್ಕೆ ಸಿಲುಕಿದ್ದ ನ್ಯೂಝಿಲ್ಯಾಂಡ್ ಗೆ ನಾಯಕ ಟಾಮ್ ಲಾಥಮ್ ಹಾಗೂ ಗ್ಲೇನ್ ಫಿಲಿಪ್ಸ್ ಜೋಡಿ ಪರಸ್ಪರ ಅರ್ಧಶತಕ ಗಳಿಸುವ ಮೂಲಕ ಆಸರೆಯಾದರು.

ಟಾಮ್ ಲಾಥಮ್ 70 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 68 ರನ್ ಬಾರಿಸಿದರೆ, ಗ್ಲೇನ್ ಫಿಲಿಪ್ಸ್ 79 ಎಸೆತಗಳಲ್ಲಿ 4 ಬೌಂಡರಿ 4ಸಿಕ್ಸರ್ ಸಹಿತ 71 ಗಳಿಸುವ ಮೂಲಕ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಡೆದರು. ಆದರೆ ಮತ್ತೆ ನ್ಯೂಝಿಲ್ಯಾಂಡ್ ನ್ನು ಕಟ್ಟಿಹಾಕಿದ ನವೀನ್ ಉಲ್ ಹಕ್ 48 ನೇ ಓವರ್ ನಲ್ಲಿ ಟಾಮ್ ಲಾಥಮ್ ಹಾಗೂ ಗ್ಲೇನ್ ಫಿಲಿಪ್ಸ್ ಔಟ್ ಮಾಡುವ ಮೂಲಕ ತಂಡ ಮುನ್ನೂರ ಗಡಿ ದಾಟುವುದನ್ನು ತಡೆದರು. ಕಡೇ ಕ್ಷಣದಲ್ಲಿ ಮಾರ್ಕ್ ಚಾಪ್ಮನ್ 25 ಬಾರಿದರೆ ಸಾಂಟ್ನರ್ 7 ರನ್ ಗಳಿಸಿದರು.

ನ್ಯೂಝಿಲ್ಯಾಂಡ್ ವಿರುದ್ಧ ಅಜ್ಮಾತುಲ್ಲಾ ಒಮರ್ಜೈ, ನವೀನ್ ಉಲ್ ಹಕ್ 2 ವಿಕೆಟ್ ಪಡೆದರೆ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಕಬಳಿಸಿದರು.

ಪಂದ್ಯ ಶ್ರೇಷ್ಠ : ಗ್ಲೇನ್ ಫಿಲಿಪ್ಸ್

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ