Mysore
25
scattered clouds

Social Media

ಬುಧವಾರ, 15 ಜನವರಿ 2025
Light
Dark

ಇಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್​ಗಳ ಜಯ: ಭಾರತದೊಂದಿಗೆ ಈ ವಿಶ್ವದಾಖಲೆ ಹಂಚಿಕೊಂಡ ಜಿಂಬಾಬ್ವೆ

ಜಿಂಬಾಬ್ವೆ ತಂಡವು ಐಸಿಸಿ ಏಕದಿನ ವಿಶ್ವಕಪ್​ ಕ್ವಾಲಿಫೈಯರ್​ ಟೂರ್ನಮೆಂಟ್​ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊನ್ನೆ 2 ಬಾರಿಯ ವಿಶ್ವಚಾಂಪಿಯನ್​ ವಿಂಡೀಸ್​ಗೆ ಸೋಲುಣಿಸಿದ್ದ ಜಿಂಬಾಬ್ವೆ ಇದೀಗ ಯುಎಸ್​ ತಂಡದ ವಿರುದ್ಧ 304 ರನ್​ಗಳ ಜಯ ಸಾಧಿಸಿ ವಿಶ್ವದಾಖಲೆಗೆ ಪಾತ್ರವಾಗಿದೆ.

ಜಿಂಬಾಬ್ವೆ ಐಸಿಸಿ ಏಕದಿನ ವಿಶ್ವಕಪ್​ ಕ್ವಾಲಿಫೈಯರ್​ ಟೂರ್ನಮೆಂಟ್​ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊನ್ನೆ 2 ಬಾರಿಯ ವಿಶ್ವಚಾಂಪಿಯನ್​ ವಿಂಡೀಸ್​ಗೆ ಸೋಲುಣಿಸಿದ್ದ ಜಿಂಬಾಬ್ವೆ ಇದೀಗ ಯುಎಸ್​ ತಂಡದ ವಿರುದ್ಧ 304 ರನ್​ಗಳ ಜಯ ಸಾಧಿಸಿ ವಿಶ್ವದಾಖಲೆಗೆ ಪಾತ್ರವಾಗಿದೆ.

 ಇನ್ನೂ ಈ ಪಂದ್ಯಕ್ಕೆ ಬರುವುದಾದರೆ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿ 50 ಓವರ್​ಗಳಲ್ಲಿ 408ರನ್​ಗಳಿಸಿತ್ತು. ಇದು ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಜಿಂಬಾಬ್ವೆ ತಂಡದ ಮೊದಲ 400 ಪ್ಲಸ್​ ರನ್​ ಆಗಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300 ರನ್​ಗಳ ಅಂತರದಿಂದ ಜಯ ಸಾಧಿಸಿದ 2ನೇ ತಂಡ ಎನಿಸಿಕೊಂಡಿದೆ. ಭಾರತ ತಂಡ ಮಾತ್ರ ಏಕದಿನ ಕ್ರಿಕೆಟ್​ನಲ್ಲಿ 300 (317) ರನ್​ಗಳ ಅಂತರದ ಜಯ ಸಾಧಿಸಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300 ರನ್​ಗಳ ಅಂತರದಿಂದ ಜಯ ಸಾಧಿಸಿದ 2ನೇ ತಂಡ ಎನಿಸಿಕೊಂಡಿದೆ. ಭಾರತ ತಂಡ ಮಾತ್ರ ಏಕದಿನ ಕ್ರಿಕೆಟ್​ನಲ್ಲಿ 300 (317) ರನ್​ಗಳ ಅಂತರದ ಜಯ ಸಾಧಿಸಿದೆ.

ಇನ್ನೂ ಈ ಪಂದ್ಯಕ್ಕೆ ಬರುವುದಾದರೆ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿ 50 ಓವರ್​ಗಳಲ್ಲಿ 408 ರನ್ ​ಗಳಿಸಿತ್ತು. ಇದು ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಜಿಂಬಾಬ್ವೆ ತಂಡದ ಮೊದಲ 400 ಪ್ಲಸ್​ ರನ್​ ಆಗಿದೆ.

ತಂಡದ ನಾಯಕ ಸೀನ್ ವಿಲಿಯಮ್ಸನ್​ 101 ಎಸೆತಗಳಲ್ಲಿ 174 ರನ್​ಗಳಿಸಿದರೆ, ಜೋಯ್ಲಾರ್ಡ್​ ಗುಮ್ಬೀ 78, ಸಿಕಂದರ್ ರಾಜಾ 48, ರಿಯಾನ್ ಬರ್ಲ್​ 47 ರನ್​ಗಳಿಸಿದ್ದರು. ಇದಕ್ಕುತ್ತರವಾಗಿ ಯುಎಸ್​ ತಂಡ ಕೇವಲ 104 ರನ್​ಗಳಿಗೆ ಸರ್ವಪತನಗೊಂಡಿತ್ತು. ರಿಚರ್ಡ್​ ನಗರವಾ 25ಕ್ಕೆ2, ಬ್ರಾಡ್ ಇವಾನ್ಸ್ 20ಕ್ಕೆ1, ರಾಜಾ 15ಕ್ಕೆ2, ಲ್ಯೂಕ್ ಜಾಂಗ್ವೆ 21ಕ್ಕೆ1 ಹಾಗೂ ಬರ್ಲ್​18ಕ್ಕೆ 1 ವಿಕೆಟ್ ಪಡೆದಿದ್ದರು.

ಇನ್ನು ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಗರಿಷ್ಠ ರನ್​ಗಳ ಅಂತರ ಜಯ ಸಾಧಿಸಿದ ಟಾಪ್ 5 ತಂಡಗಳನ್ನು ನೋಡುವುದಾದರೆ, ಭಾರತ 317ರನ್​ಗಳ ಜಯ vs ಶ್ರೀಲಂಕಾ, ಜಿಂಬಾಬ್ವೆ 304 ರನ್​ಗಳ ಜಯ vs ಅಮೆರಿಕಾ, ನ್ಯೂಜಿಲ್ಯಾಂಡ್​ 290ರನ್​ಗಳ ಜಯ vs ಐರ್ಲೆಂಡ್​, ಆಸ್ಟ್ರೇಲಿಯಾ 275 ರನ್​ಗಳ ಜಯ vs ಅಫ್ಭಾನಿಸ್ತಾನ, ದಕ್ಷಿಣ ಆಫ್ರಿಕಾ 272ರನ್​ಗಳ ಜಯ vs ಜಿಂಬಾಬ್ವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ