ಪ್ಯಾರಿಸ್: ಅರ್ಜೆಂಟೀನಾ ಫುಟ್‌ಬಾಲ್ ತಂಡದ ನಾಯಕ ಲಯೊನೆಲ್ ಮೆಸ್ಸಿ, ಪ್ರತಿಷ್ಠಿತ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫುಟ್‌ಬಾಲ್ ವಿಶ್ವಕಪ್ ವಿಜೇತ ನಾಯಕ ಮೆಸ್ಸಿ, ಅರ್ಜೆಂಟೀನಾದ ಪರವಾಗಿ ಲಾರೆಸ್ ವರ್ಷದ ವಿಶ್ವ ತಂಡ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಮೂಲಕ ಒಂದೇ ಸಾಲಿನಲ್ಲಿ ಲಾರೆಸ್ ವರ್ಷದ ಕ್ರೀಡಾಪಟು ಹಾಗೂ ವರ್ಷದ ತಂಡ ಪ್ರಶಸ್ತಿ ಗದ್ದ ಮೊಟ್ಟ ಮೊದಲ ಕ್ರೀಡಾಪಟು ಎನಿಸಿದ್ದಾರೆ.
https://twitter.com/LaureusSport/status/1655692463061839875?s=20
ಇದರೊಂದಿಗೆ ಮೆಸ್ಸಿ, ಎರಡನೇ ಬಾರಿಗೆ ಲಾರೆಸ್ ವರ್ಷದ ಕ್ರೀಡಾಪಟು ಗೆದ್ದ ಸಾಧನೆ ಮಾಡಿದ್ದಾರೆ. ಈ ಹಿಂದೆ 2020 ರಲ್ಲಿ ದಿಗ್ಗಜ ಫಾರ್ಮುಲಾ ಒನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಜೊತೆ ಪ್ರತಿಷ್ಠಿತ ಪ್ರಶಸ್ತಿ ಹಂಚಿಕೊಂಡಿದ್ದರು.
ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿದ 35 ವರ್ಷದ ಮೆಸ್ಸಿ, ಫೆಡರರ್, ನಡಾಲ್, ಶುಮಾಕರ್, ಜೊಕೊವಿಕ್, ಬೋಲ್ಟ್ ಸೇರಿದಂತೆ ದಿಗ್‌ಜರ ಸಾಲಿನಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.