ಅಹ್ಮದಾಬಾದ್ : ಐಸಿಸಿ ಏಕದಿನ ವಿಶ್ವಕಪ್ ೨೦೨೩ ಫೈನಲ್‌ನಲ್ಲಿ ಭಾರತ ತಂಡವು ಆಸೀಸ್ ವಿರುದ್ಧ ಮುಗ್ಗರಿಸಿ ಪ್ರಶಸ್ತಿ ರನ್ನರ್ಸ್ ಪಟ್ಟ ಪಡೆಯಿತು. ಇದೆಲ್ಲದರ ಹೊರತಾಗಿಯೂ ರನ್ ಮೆಷಿನ್ ವಿರಾಟ್ ಕೊಹ್ಲಿ ತಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಟಗಾರನೊಬ್ಬನಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ಭಾನುವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಧ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ವರ್ಲ್ಡ್‌ಕಪ್ ೨೩ರ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಆಟಗಾರ ಮ್ಯಾಕ್ಸ್‌ವೆಲ್ ಅವರಿಗೆ ತಾವು ಸಹಿ ಮಾಡಿದ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಮತ್ತೊಮ್ಮೆ ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ.
ಈ ಪಂದ್ಯದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರು ೫೪ ರನ್ ಬಾರಿಸುವ ಮೂಲಕ ಈ ಟೂರ್ನಿಯ ಅತ್ಯಧಿಕ ರನ್ ಸ್ಕೋರರ್ ಆದರು. ಹಾಗೂ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಸಹಾ ಸರಿಗಟ್ಟಿದರು.
ಫೈನಲ್‌ನಲ್ಲಿ ಭಾರತ ತಂಡ ಕೊಹ್ಲಿ (೫೪), ನಾಯಕ ರೋಹಿತ್ ಶರ್ಮಾ(೪೭), ಕನ್ನಡಿಗ ರಾಹುಲ್ (೬೬) ಹೊರತಾಗಿ ಭಾರತ ೨೪೧ ರನ್ ಗುರಿ ನೀಡಿತು.
ಮಿಚೆಲ್ ಸ್ಟಾರ್ಕ್ ೫೭ಕ್ಕೆ೩ ಹಾಗೂ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಟ್ರಾವಿಸ್ ಹೆಡ್ (೧೩೭) ಅವರ ಅಮೊಘ ಪ್ರದರ್ಶ ಮೂಲಕ ಭಾರತ ತಂಡ ವಿರುದ್ಧ ಆಸೀಸ್ ಜಯ ಗಳಿಸಿ ತಮ್ಮ ೬ನೇ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
https://x.com/cricketworldcup/status/1726426465355341832?s=20