Mysore
22
broken clouds

Social Media

ಸೋಮವಾರ, 13 ಜನವರಿ 2025
Light
Dark

ಮನೀಶ್‌ ಪಾಂಡೆ ಪಡೆಗೆ ರೋಚಕ ಜಯ

ಮೈಸೂರು :ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಯುನೈಟೆಡ್‌ ವಿರುದ್ಧದ ಪಂದ್ಯದಲ್ಲಿ 28 ರನ್‌ಗಳ ಅಂತರದಲ್ಲಿ ಅದ್ಭುತ ಜಯ ದಾಖಲಿಸಿದೆ.

ಜಯ ಗಳಿಸಲು ಗುಲ್ಬರ್ಗ ತಂಡ ಮಂಗಳೂರಿಗೆ 165 ರನ್‌ಗಳ ಕಠಿಣ ಸವಾಲು ನೀಡಿತ್ತು. ಅಭಿನವ್‌ ಮನೋಹರ್‌ (51) ಕ್ರೀಸಿನಲ್ಲಿ ಇರುವವರೆಗೂ ಮಂಗಳೂರು ಗೆಲ್ಲುವ ಲಕ್ಷಣ ತೋರಿತ್ತು, ಆದರೆ ಗುಲ್ಬರ್ಗದ ಬೌಲರ್‌ಗಳಾದ ವಾಧ್ವಾನಿ ಹಾಗೂ ಕಾರ್ತಿಕ್‌ ಎರಡು ಓವರ್‌ಗಳಲ್ಲಿ 5 ವಿಕೆಟ್‌ ಹಂಚಿಕೊಳ್ಳುವ ಮೂಲಕ ಮಂಗಳೂರು ಸೋಲಿನ ಅಂಚಿಗೆ ಸಿಲುಕಿತು. ಅಂತಿಮವಾಗಿ 8 ಎಸೆತ ಬಾಕಿ ಇರುವಾಗಲೇ ಮಂಗಳೂರು 136 ರನ್‌ ಗಳಿಸಿ ಸರ್ವ ಪತನ ಕಂಡಿತು.

ಸವಾಲಿನ ಮೊತ್ತ ಗಳಿಸಿದ ಗುಲ್ಬರ್ಗ:

ನಾಯಕ ಮನೀಶ್‌ ಪಾಂಡೆ (58) ಹಾಗೂ ಕೋದಂಡ ಅಜಿತ್‌ (38) ಅವರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡ ಮಂಗಳೂರು ಯುನೈಟೆಡ್‌ ವಿರುದ್ಧ 6 ವಿಕೆಟ್‌ಗೆ 164 ರನ್‌ ಗಳಿಸಿತು. ದೇವದತ್ತ ಪಡಿಕ್ಕಲ್‌ 25 ರನ್‌ ಗಳಿಸಿ ಗುಲ್ಬರ್ಗಕ್ಕೆ ಉತ್ತಮ ಆರಂಭ ಕಲ್ಪಿಸಿದ್ದರು.

ನಾಯಕ ಪಾಂಡೆ 40 ಎಸೆಗಳನ್ನೆದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 58 ರನ್‌ ಗಳಿಸಿ ಕುಸಿದ ತಂಡಕ್ಕೆ ನೆರವಾದರು. ಪಡಿಕ್ಕಲ್‌ ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಸೇರಿತ್ತು. ಅಜಿತ್‌ ಕಾರ್ತಿಕ್‌ 38* ರನ್‌ ಗಳಿಸಲು 5.2 ಓವರ್‌ಗಳಲ್ಲು ವಿವಿಯೋಗಿಸಿದರು. ಇದು ಮಂದಗತಿಯ ರನ್‌ ಗಳಿಕೆಯಾಗಿ ಕಾಣಬಹುದು, ಆದರೆ ವಿಕೆಟ್‌ ಉರುಳುತ್ತಿರುವಾಗ ನಾಯಕನಿಗೆ ಉತ್ತಮ ರೀತಿಯಲ್ಲಿ ಸಾಥ್‌ ನೀಡಿ ಇನ್ನಿಂಗ್ಸ್‌ ಕಟ್ಟುವುದೂ ಮುಖ್ಯವಾಗಿತ್ತು. ಕಾರ್ತಿಕ್‌ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿತ್ತು.

ಕೊನೆಯ ಕ್ಷಣದಲ್ಲಿ ರಿತೇಶ್‌ ಭಟ್ಕಳ್‌ 6 ಎಸೆತಗಳನ್ನೆದುರಿಸಿ ಗಳಿಸಿದ 18 ರನ್‌ನಿಂದಾಗಿ ಗುಲ್ಬರ್ಗ ಸವಾಲಿನ ಮೊತ್ತ ಗಳಿಸುವಲ್ಲಿ ಯಶಸ್ವಿಯಾಯಿತು. ಮಂಗಳೂರು ಯುನೈಟೆಡ್‌ ಪರ ಎಚ್‌.ಎಸ್‌ ಶರತ್‌ ಹಾಗೂ ವೈಶಾಖ್‌ ವಿಜಯ್‌ ಕುಮಾರ್‌ ತಲಾ 2 ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌:

ಗುಲ್ಬರ್ಗ ಮಿಸ್ಟಿಕ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 164 (ಮನೀಶ್‌ ಪಾಂಡೆ 58, ದೇವದತ್ತ ಪಡಿಕ್ಕಲ್‌ 25, ಅಜಯ್‌ ಕಾರ್ತಿಕ್‌ 38* ವೈಶಾಖ್‌ ವಿಜಯ್‌ ಕುಮಾರ್‌ 31ಕ್ಕೆ 2, ಶರತ್‌ 43ಕ್ಕೆ 2)

ಮಂಗಳೂರು ಯುನೈಟೆಡ್‌: 18.4 ಓವರ್‌ಗಳಲ್ಲಿ 136 (ಅಭಿನವ್‌ ಮನೋಹರ್‌ 51, ಸುಜಯ್‌ ಸತರ್‌ 22, ಕೌಶಲ್‌ ವಾಧ್ವಾನಿ 48ಕ್ಕೆ 3, ಕಾರ್ತಿಕ್‌ 9ಕ್ಕೆ 2, ಪವನ್‌ ಭಾಟಿಯಾ 26ಕ್ಕೆ 2)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ