Light
Dark

ಮಂಗಳೂರಿಗೆ ಸೋಲುಣಿಸಿದ ಶಿವಮೊಗ್ಗ ಸ್ಟ್ರೈಕರ್ಸ್‌

ಬೆಂಗಳೂರು : ಮೊದಲ ಬಾರಿಗೆ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡ ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಯುನೈಟೆಡ್‌ ವಿರುದ್ಧ 8 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದೆ.

ನಾಯಕ ಕೃಷ್ಣಪ್ಪ ಗೌತಮ್‌ (72) ಹಾಗೂ ಸ್ಟಾಲಿನ್‌ ಹೂವರ್‌ (53*) ಅವರ ಆರ್ಕಷಕ ಅರ್ಧ ಶತದಕ ನೆರವಿನಿಂದ ಶಿವಮೊಗ್ಗ 137 ರನ್‌ಗಳ ಜಯದ ಗುರಿಯನ್ನು ಇನ್ನೂ 46 ಎಸೆತಗಳು ಬಾಕಿ ಇರುವಾಗಲೇ ಕೇವಲ 2 ವಿಕೆಟ್‌ ಕಳೆದುಕೊಂಡು ತಲುಪಿತು. ಈಗಾಗಲೇ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಶಿವಮೊಗ್ಗಕ್ಕೆ ಈ ಜಯ ಆತ್ಮವಿಶ್ವಾಸವನ್ನು ಹೆಚ್ಚಿಸಿತೇ ಹೊರತು, ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನುಂಟು ಮಾಡಲಿಲ್ಲ.
ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಗೌತಮ್‌ ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್‌ ಸೇರಿತ್ತು. ಸ್ಟಾಲಿನ್‌ ಹೂವರ್‌ ಕೇವಲ 35 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್‌ ನೆರವಿನಿಂದ ಅಜೇಯ 53 ರನ್‌ ಗಳಿಸಿದರು. ಕೃಷ್ಣಪ್ಪ ಗೌತಮ್‌ ಹಾಗೂ ಹೂವರ್‌ 131 ರನ್‌ ಜೊತೆಯಾಟವಾಡಿದರು.

ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟ ಮಂಗಳೂರು:
ನಾಯಕ ಕೃಷ್ಣಪ್ಪ ಗೌತಮ್‌ ಅವರ ಬೌಲಿಂಗ್‌ ದಾಳಿಗೆ ಸಿಲುಕಿದ ಮಂಗಳೂರು ಯುನೈಟೆಡ್‌ ಕೇವಲ 136 ರನ್‌ ಗಳಿಸಿದೆ. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಶಿವಮೊಗ್ಗ ಸ್ಟ್ರೈಕರ್ಸ್‌, ನಿಕಿನ್‌ ಜೋಸ್‌ (38) ಹಾಗೂ ಅಭಿನವ್‌ ಮನೋಹರ್‌

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ