Mysore
21
overcast clouds
Light
Dark

ಅಂತಾರಾಷ್ಟ್ರೀಯ ಫುಟ್ಬಾಲ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳುವ ಸುಳಿವು ನೀಡಿದ ಮೆಸ್ಸಿ

ಖ್ಯಾತ ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಅವರು ತಮ್ಮ ಕ್ರೀಡಾ ವೃತ್ತಿಗೆ ನಿವೃತ್ತಿ ಹೇಳುವ ಸುಳಿವು ನೀಡಿದ್ದಾರೆ.

ಹೌದು ಅರ್ಜೆಂಟೇನಾದ ಲಿಯೋನಲ್ ಮೆಸ್ಸಿ ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಫಿಫಾ ಪುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಮೂಲಕ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳುವುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಫಿಫಾ ಪುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯು ತಮ್ಮ ಜೀವನದ ಕೊನೆಯ ಪಂದ್ಯವಾಗಿದ್ದು ಇದರಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುವ ಭರವಸೆಯನ್ನು ಒಂದು ಅದರ ಜೊತೆಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

ಪಂದ್ಯವು ಈ ವರ್ಷದ ನವೆಂಬರ್ ಅಂತ್ಯದಲ್ಲಿ ಹಾಗೂ ಡಿಸೆಂಬರ್ ಆರಂಭದ ವೇಳೆಗೆ ಕತಾರ್ ನಲ್ಲಿ ನಡೆಯಲಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ