Mysore
29
clear sky

Social Media

ಮಂಗಳವಾರ, 21 ಜನವರಿ 2025
Light
Dark

ಕೊಹ್ಲಿ ವಿಶ್ವ ದಾಖಲೆ ಸರಿಗಟ್ಟಿದ ಪಾಕಿಸ್ತಾನದ ಬಾಬರ್ ಅಜಂ!

ಟೀಮ್ ಇಂಡಿಯಾ ಮಾಜಿ ಆಟಗಾರ ವಿರಾಟ್ ಕೊಹ್ಲಿ ಅವರ ಟಿ20 ಕ್ರಿಕೆಟ್ ನ ಅತಿ ವೇಗದ 3000 ರನ್ ದಾಖಲೆಯನ್ನು ಪಾಕಿಸ್ತಾನದ ಆಟಗಾರ ಬಾಬರ್ ಅಜಂ ಅವರು ಮುರಿದಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯಾವಳಿಯಲ್ಲಿ ಬಾಬರ್ ಅಜಂ 87 (59 ಎಸೆತ, 7 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ 3000 ರನ್ ಗಡಿ ದಾಟಿದ್ದಾರೆ.

27 ವರ್ಷದ ಬಾಬರ್ ಅವರು ಈ ದಾಖಲೆ ಮಾಡಲು 81 ಇನ್ಸಿಂಗ್ ತೆಗೆದುಕೊಂಡಿದ್ದರು. ಈ ಮೂಲಕ ಬಾಬರ್ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ 3000 ರನ್ ಪೂರೈಸಿದ ಐದನೇ ಪುರುಷ ಆಟಗಾರ ಹಾಗೂ ಟಿ20 ಕ್ರಿಕೆಟ್ ನಲ್ಲಿ ಒಟ್ಟಾರೆ ಎಂಟನೇ ಆಟಗಾರ ಎನಿಸಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ