Mysore
29
broken clouds
Light
Dark

ICC t20 worldcup 2024: ಇಂಡಿಯಾ-ಪಾಕಿಸ್ತಾನ್‌ ಪಂದ್ಯಕ್ಕೆ ಉಗ್ರರ ಬೆದರಿಕೆ

ಅಮೇರಿಕಾ: ಅಮೇರಿಕಾ ಮತ್ತು ವೆಸ್ಟ್‌ ಇಂಡೀಸ್‌ ಸಹ ಭಾಗಿತ್ವದಲ್ಲಿ ಇದೇ ಜೂನ್‌.2ರಿಂದ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಉಗ್ರರು ಬೆದರಿಕೆ ಒಡ್ಡಿದ್ದಾರೆ.

ಜೂನ್‌.9ರಂದು ನಡೆಯಲಿರುವ ಭಾರತ-ಪಾಕಿಸ್ತಾನ್‌ ನಡುವಿನ ಪಂದ್ಯಕ್ಕೆ ಐಸ್‌ ಉಗ್ರ ಸಂಘಟನೆಯಿಂದ ಬೆದರಿಕೆ ಕರೆ ಬಂದಿದೆ ಎಂದು ಅಮೇರಿಕಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಐಸ್‌ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಲೋನ್‌ ವುಲ್ಫ್‌ ಸಂಘಟನೆ, ಭಾರತ-ಪಾಕ್‌ ಪಂದ್ಯಕ್ಕೆ ಬಾಂಬ್‌ ಹಾಕುವುದಾಗಿ ಬೆದರಿಕೆ ಕರೆ ನೀಡಿದೆ. ಈ ಬಗ್ಗೆ ವೀಡಿಯೋ ಹೇಳಿಯನ್ನು ಉಗ್ರ ಸಂಘಟನೆ ಬಿಡುಗಡೆ ಮಾಡಿದೆ ಎಂದು ಪೊಲೀಸ್‌ ಅಧಿಕಾರಿ ಪ್ಯಾಟ್ರಿಕ್‌ ರೈಡರ್‌ ಹೇಳಿದ್ದಾರೆ.

ಇಲ್ಲಿನ ಐಸೆನೋವಾರ್‌ ಪಾರ್ಕ್‌ನಲ್ಲಿನ ಕ್ರೀಡಾಂಗಣದಲ್ಲಿ ಟೀಮ್‌ ಇಂಡಿಯಾ-ಪಾಕಿಸ್ತಾನ್‌ ನಡುವೆ ರೋಚಕ ಹಣಾಹಣೆ ನಡೆಯಲಿದೆ.