Mysore
16
clear sky

Social Media

ಮಂಗಳವಾರ, 20 ಜನವರಿ 2026
Light
Dark

IPL ಚಾಂಪಿಯನ್‌ RCB ಮಾರಾಟಕ್ಕಿದೆ.. ! ಯಾರ ಪಾಲು..? ಎಷ್ಟು ಮೊತ್ತಾ ಗೊತ್ತಾ?

ಬೆಂಗಳೂರು : ಭಾರತೀಯ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಮಾರಾಟಕ್ಕೆ ಸಿದ್ಧವಾಗಿದೆ.

ತಂಡದ ಪ್ರಸ್ತುತ ಮಾಲೀಕರಾದ ಡಿಯಾಜಿಯೊ ಕಂಪೆನಿಯು ಅಧಿಕೃತವಾಗಿ ಮಾರಾಟ ಪ್ರಕ್ರಿಯೆ ಆರಂಭಿಸಿರುವುದಾಗಿ ಬುಧವಾರ ಬಾಂಬೆ ಷೇರು ವಿನಿಮಯ ಕೇಂದ್ರಕ್ಕೆ (ಬಿಎಸ್‌ಇ) ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲಗಳ ಪ್ರಕಾರ ಬರೊಬ್ಬರಿ ಎರಡು ಬಿಲಿಯನ್‌ ಮೌಲ್ಯ ಹೊಂದಿರುವ ತಂಡವಾದ ಆರ್‌ಸಿಬಿ ಫ್ರಾಂಚೈಸಿ ಮಾರಾಟಕ್ಕೆ ಸಿದ್ಧವಾಗಿದೆ.
ಕಂಪೆನಿಯ ಪ್ರಕಾರ, ಈ ಪ್ರಕ್ರಿಯೆ 2026ರ ಮಾರ್ಚ್‌ 31ರೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಡಿಯಾಜಿಯೊ ತನ್ನ ಭಾರತೀಯ ಅಂಗಸಂಸ್ಥೆಯಾದ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಮೂಲಕ ಆರ್‌ಸಿಬಿ ತಂಡವನ್ನು ಹೊಂದಿದೆ.

ಇದನ್ನೂ ಓದಿ:-ಬಿಡದಿ ಟೌನ್‌ ಶಿಪ್‌ : ರೈತರಿಕೆ ಅಭಯ ನೀಡಿದ ಎಚ್‌ಡಿಕೆ

USL ಪ್ರಕಟಣೆಯಲ್ಲಿ ಹೇಳಿರುವಂತೆ, “ಕಂಪೆನಿ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಾಯಲ್ ಚಾಲೆಂಜರ್ಸ್‌ ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ (RCSPL) ನಲ್ಲಿನ ಹೂಡಿಕೆಯ ಕಾರ್ಯತಂತ್ರದ ಪರಿಶೀಲನೆ ಪ್ರಾರಂಭಿಸಿದೆ. RCSPL ಕಂಪೆನಿ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಆಯೋಜಿಸುವ ಐಪಿಎಲ್‌ ಮತ್ತು ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಸ್ಪರ್ಧೆಗಳಲ್ಲಿ ಭಾಗವಹಿಸುವ ಆರ್‌ಸಿಬಿ ತಂಡದ ಮಾಲೀಕತ್ವ ಹೊಂದಿದೆ.

Tags:
error: Content is protected !!