Mysore
23
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

IPL 2025: 159ಕ್ಕೆ ರಾಜಸ್ಥಾನ್‌ ಆಲೌಟ್: ಗುಜರಾತ್‌ಗೆ 58 ರನ್‌ಗಳ ಭರ್ಜರಿ ಗೆಲುವು

ಅಹಮದಾಬಾದ್‌: ಸಂಘಟಿತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಸಹಾಯದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮಣಿಸಿದ ಗುಜರಾತ್‌ ಟೈಟನ್ಸ್‌ 2025ರ 18 ಆವೃತ್ತಿಯ ಐಪಿಎಲ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್‌ ಟೈಟನ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಣ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 217 ರನ್‌ ಕಲೆಹಾಕಿತು. ಈ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌ 19.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 159 ರನ್‌ ಗಳಿಸಿ 58 ರನ್‌ಗಳ ಅಂತರದಿಂದ ಹೀನಾಯ ಸೋಲು ಕಂಡಿತು.

ಜಿಟಿ ಇನ್ನಿಂಗ್ಸ್‌: ತವರಿನಂಗಳದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ಗೆ ಆರಂಭಿಕ ಆಘಾತ ಎದುರಾಯಿತು. ನಾಯಕ ಗಿಲ್‌ ಕೇವಲ ಎರಡು ರನ್‌ಗೆ ಸುಸ್ತಾಗಿ ವಿಕೆಟ್‌ ಒಪ್ಪಿಸಿ ಹೊರನಡೆದರು.

ಇದಾದ ಬಳಿಕ ಬಂದ ಜೋಸ್‌ ಬಟ್ಲರ್‌ ಆರಂಭಿಕ ಆಟಗಾರ ಸಾಯ್‌ ಸುದರರ್ಶನ್‌ ಜೊತೆಗೂಡಿ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಈ ಜೋಡಿ 80 ರನ್‌ಗಳ ಜೊತೆಯಾಟ ನೀಡಿದರು. ಜೋಸ್‌ 25 ಎಸೆತಗಳಲ್ಲಿ 36 ರನ್‌ ಗಳಿಸಿ ಔಟಾಗದೇ ಸಾಯ್‌ ಸುದರ್ಶನ್‌ 53 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್‌ ಸಹಿತ 82 ರನ್‌ ಗಳಸಿ ಶತಕ ವಂಚಿತರಾದರು.

ಕೊನೆಯಲ್ಲಿ ಅಬ್ಬರಿಸಿದ ಶಾರುಖ್‌ ಖಾನ್‌ 36(20), ರುದರ್‌ಫರ್ಡ್‌ 7(3), ರಾಹುಲ್‌ ತೆವಾಟಿಯಾ ಔಟಾಗದೇ 24(12), ರಶೀದ್‌ ಖಾನ್‌ 12(4), ಅರ್ಶದ್‌ ಖಾನ್‌ ಖಾತೆ ತೆರೆಯದೇ ಉಳಿದರು.

ರಾಜಸ್ಥಾನ್‌ ಪರ ತೀಕ್ಷಣ ಹಾಗೂ ತುಷಾರ್‌ ದೇಶ್‌ಪಾಂಡೆ ತಲಾ ಎರಡು ವಿಕಟ್‌, ಜೋಫ್ರಾ ಆರ್ಚರ್‌ ಮತ್ತು ಸಂದೀಪ್‌ ಶರ್ಮಾ ಒಂದೊಂದು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

ಆರ್‌ಆರ್‌ ಇನ್ನಿಂಗ್ಸ್‌: ಈ ಬೃಹತ್ ಮೊತ್ತ ಬೆನ್ನತ್ತಿದ ಆರ್‌ಆರ್‌ಗೆ ಉತ್ತಮ ಜೊತೆಯಾಟ ಸಿಗಲೇ ಇಲ್ಲ. ಹೆಟ್ಮಾಯರ್‌ 52(32), ನಾಯಕ ಸಂಜು ಸ್ಯಾಮ್ಸನ್‌ 41(28) ಮತ್ತು ರಿಯಾನ್‌ ಪರಾಗ್‌ 26(14) ಕೊಂಚ ಅಬ್ಬರಿಸಿದರು ಹೊರತಾಗಿ ಇನ್ಯಾವುದೇ ಆಟಗಾರ ಎರಡಂಕಿ ಮೊತ್ತ ದಾಟಲು ಸಫಲವಾಗಲಿಲ್ಲ. ಮಧ್ಯಮ ಕ್ರಮಾಂಕದ ಕುಸಿತ ರಾಜಸ್ಥಾನ್‌ ಹೀನಾಯ ಸೋಲಿಗೆ ಕಾರಣವಾಯಿತು.

ಗುಜರಾತ್‌ ಪರ ಪ್ರಸಿದ್ಧ್‌ ಕೃಷ್ಣ ಮೂರು ವಿಕೆಟ್‌, ರಶೀದ್‌ ಖಾನ್‌ ಮತ್ತು ಸಾಯ್‌ ಕಿಶೋರ್‌ ತಲಾ ಎರಡು ವಿಕೆಟ್‌ ಪಡೆದು ಗಮನ ಸೆಳೆದರು.

Tags:
error: Content is protected !!