ಮುಂಬೈ : ಅಶ್ವನಿ ಕುಮಾರ್ ಮಾರಕ ದಾಳಿ ಹಾಗೂ ರಿಕಲ್ಟನ್ ಅವರ ಅರ್ಧಶತಕದ ಆಟದ ನೆರವಿನಿಂದ ಕೆಕೆಆರ್ ತಂಡ ಮಣಿಸಿದ ಮಂಬೈ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಮಂಬೈ ಇಂಡಿಯನ್ ಹಾಗೂ ಕಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ 16.2 ಓವರ್‌ಗಳಲ್ಲಿ 116 ರನ್ ಗಳಿಸಿ ಆಲೌಟ್ ಆಗಿತ್ತು.
ಈ ಗುರಿ ಬೆನ್ನತ್ತಿದ ಮುಂಬೈ ಎರಡು ವಿಕೆಟ್ ನಷ್ಟಕ್ಕೆ 121 ರನ್ ಗಳಸಿ ಗೆಲುವಿನ ನಗೆ ಬೀರಿತು.