ಮುಂಬೈ : ವೇಗಿ ಜಸ್‌ಪ್ರಿತ್ ಬುಮ್ರಾ ಅವರ ಮಾರಕ ದಾಳಿಗೆ ನಲುಗಿದ ಲಖನೌ ಸೂಪರ್ ಜೈಂಟ್ಸ್ ತಂಡ, ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 54 ರನ್‌ಗಳ ಅಂತರದಿಂದ ಸೋಲು ಕಂಡಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಮುಂಬೈ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿತು.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ ಎದುರಾಳಿ ತಂಡಕ್ಕೆ 216 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತುವಲ್ಲಿ ವಿಫಲವಾದ ಲಖನೌ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿ 54 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಮುಂಬೈ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅತಿಥೇಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ರಿಕೆಲ್ಟನ್ ಹಾಗೂ ಸೂರ್ಯಕುಮಾರ್ ಯಾದವ್ ಸಹಕರಿಸಿದರು.
ರಿಕೆಲ್ಟನ್ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 58 ರನ್ ಬಾರಿಸಿದರೇ, ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ 54 ರನ್ ಚಚ್ಚಿದರು.
ಉಳಿದಂತೆ ರೋಹಿತ್ ಶರ್ಮಾ 12(5), ವಿಲ್ ಜಾಕ್ 29(21), ತಿಲಕ್ ವರ್ಮಾ 6(5), ನಾಯಕ ಹಾರ್ದಿಕ್ ಪಾಂಡ್ಯ 5(7), ಕಾರ್ಬಿನ್ 20(10) ರನ್ ಗಳಿಸಿದರೇ, ನಮನ್ ಧಿರ್ ಔಟಾಗದೇ 25(11) ಹಾಗೂ ದೀಪಕ್ ಚಾಹರ್ ಒಂದು ರನ್ ಗಳಿಸಿ ಸ್ಕ್ರೀಜ್‌ನಲ್ಲಿಯೇ ಉಳಿದರು.
ಲಖನೌ ಪರ ಮಯಾಂಕ್ ಯಾದವ್ ಹಾಗೂ ಆವೇಶ್ ಖಾನ್ ತಲಾ ಎರಡು ವಿಕೆಟ್, ಪ್ರಿನ್ಸ್ ಯಾದವ್, ಬಿಷ್ಣೋಯ್ ಹಾಗೂ ದಿಗ್ವೇಶ್ ತಲಾ ಒಂದೊಂದು ವಿಕೆಟ್ ಪಡೆದರು.
ಲಖನೌ ಇನ್ನಿಂಗ್ಸ್: ಮುಂಬೈ ನೀಡಿದ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಲಖನೌಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಐಡೆನ್ ಮಾರ್ಕ್ರಂ 9(11) ವಿಕೆಟ್ ಬೇಗನೇ ಕಳೆದುಕೊಂಡಿತು. ಅಬ್ಬರದ ಬ್ಯಾಟಿಂಗ್ ಮಾಡುತ್ತಿದ ಮಿಚೆಲ್ ಮಾರ್ಷ್ 34(24), ನಿಕೋಲಸ್ ಪೂರನ್ 27(15) ರನ್ ಕಲೆಹಾಕಿದರು.
ಬಳಿಕ ಬಂದ ನಾಯಕ ರಿಷಬ್ ಪಂತ್ ಕೇವಲ ನಾಲ್ಕು ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಒಂದಾದ ಆಯೋಷ್ ಬದೋನಿ 35(22) ಹಾಗೂ ಡೇವಿಡ್ ಮಿಲ್ಲರ್ 24(16) ಕೊಂಚ ಅಬ್ಬರಿಸಿ ಮರೆಯಾದರು. ಈ ಜೋಡಿಯ ವಿಕೆಟ್ ಪತನದೊಂದಿಗೆ ಲಖನೌಗೆ ಸೋಲು ಕಂಡಿತು.
ಉಳಿದಂತೆ ಅಬ್ದುಲ್ ಸಮದ್ 2(4), ಬಿಷ್ಟೋಯ್ 13(14), ಆವೇಶ್ ಖಾನ್ ಡಕ್‌ಔಟ್ ಆದರೇ, ಪ್ರಿನ್ಸ್ ಯಾದವ್ ನಾಲ್ಕು, ದಿಗ್ವೇಶ್ ಒಂದು ರನ್ ಗಳಿಸಿ ಔಟಾಗದೇ ಉಳಿದರು.
ಮುಂಬೈ ಪರ ಬುಮ್ರಾ ಪ್ರಮುಖ ನಾಲ್ಕು ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್ ಮೂರು ವಿಕೆಟ್, ವಿಲ್ ಜಾಕ್ ಎರಡು ವಿಕೆಟ್ ಪಡೆದು ಗಮನಸೆಳೆದರು.




