Mysore
23
overcast clouds
Light
Dark

IPL 2024: ಪಂಜಾಬ್‌ ಕಿಂಗ್ಸ್‌ ಮಣಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಎಸ್‌ಆರ್‌ಎಚ್‌!

ಹೈದರಾಬಾದ್‌: ಇಲ್ಲಿನ ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಪಂಜಾಬ್‌ ಕಿಂಗ್ಸ್‌ ನಡುವಿನ 69ನೇ ಐಪಿಎಲ್‌ ಪಂದ್ಯದಲ್ಲಿ ಎಸ್‌ಆರ್‌ಎಚ್‌ 4 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ. ಆ ಮೂಲಕ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 214 ರನ್‌ ಬಾರಿಸಿ 215 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿತು. ಈ ಬೃಹತ್‌ ಮೊತ್ತ ಬೆನ್ನತ್ತಿದ ಸನ್‌ರೈಸರ್ಸ್‌ ಹೈದರಾಬಾದ್‌ 19.1 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 216 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಪಂಜಾಬ್‌ ಕಿಂಗ್ಸ್‌ ಇನ್ನಿಂಗ್ಸ್‌: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಸ್‌ಗೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾಗಿ ಬಂದ ಅಥರ್ವಾ ತೈಡೆ ಹಾಗೂ ಪ್ರಭ್‌ಸಿಮ್ರಾನ್‌ ಪವರ್‌ಪ್ಲೇ ನಲ್ಲಿ ಉತ್ತಮ ರನ್‌ ಕಲೆಹಾಕಿದರು. ಅಥರ್ವಾ ತೈಡೆ 46(27), ಪ್ರಭ್‌ಸಿಮ್ರಾನ್‌ ಸಿಂಗ್‌ 71(45) ರನ್ ಕಲೆಹಾಕಿದರು. ಈ ಇಬ್ಬರು 97ರನ್‌ಗಳ ಜತೆಯಾಟ ನೀಡಿದರು.

ಬಳಿಕ ಬಂದ ರಿಲ್ಲಿ ರೂಸೋ 49(24) ರನ್‌, ಶಶಾಂಕ್‌ ಸಿಂಗ್‌ 2(4) ರನ್‌, ನಾಯಕ ಜಿತೇಶ್‌ ಶರ್ಮಾ ಔಟಾಗದೇ 32(15) ರನ್‌, ಅಶುತೋಷ್‌ ಶರ್ಮಾ 2(3) ರನ್‌ ಹಾಗೂ ಶಿವಂ ಸಿಂಗ್‌ ಔಟಾಗದೇ 2(3) ರನ್‌ ಬಾರಿಸಿದರು.

ಹೈದರಾಬಾದ್‌ ಪರ ನಟರಾಜ್‌ 2 ವಿಕೆಟ್‌ ಪಡೆದರೇ, ನಾಯಕ ಕಮಿನ್ಸ್‌ ಮತ್ತು ವಿಜಯಕಾಂತ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಸನ್‌ರೈಸರ್ಸ್‌ ಹೈದರಾಬಾದ್‌ ಇನ್ನಿಂಗ್ಸ್‌: ತಮ್ಮ ತವರಿನಂಗಳದಲ್ಲಿ ಪಂಜಾಬ್‌ ನೀಡಿದ ಬೃಹತ್‌ ಮೊತ್ತ ಬೆನ್ನತ್ತಿದ ಎಸ್‌ಆರ್‌ಎಚ್‌ಗೆ ಆರಂಭಿಕ ಆಘಾತ ಎದುರಾಯಿತು. ಹರ್ಷ್‌ದೀಪ್‌ ಸಿಂಗ್‌ ದಾಳಿಗೆ ಡ್ರಾವಿಸ್‌ ಹೆಡ್ ಕ್ಲೀನ್‌ ಬೌಲ್ಡ್‌ ಆಗಿ ಖಾತೆ ತೆರೆಯದೆ ನಿರ್ಗಮಿಸಿದರು.

ಇತ್ತ ಜತೆಯಾದ ಅಭಿಷೇಕ್‌ ಶರ್ಮಾ ಮತ್ತು ರಾಹುಲ್‌ ತ್ರಿಪಾಟಿ ತಂಡಕ್ಕೆ ಚೇತರಿಕೆ ಆಟವಾಡಿದರು. ಅಭಿಷೇಕ್‌ ಶರ್ಮಾ 66(28) ರನ್‌ ಬಾರಿಸಿದರೇ, ರಾಹುಲ್‌ ತ್ರಿಪಾಟಿ 33(18) ರನ್‌ ಬಾರಿಸಿ ನಿರ್ಗಮಿಸಿದರು. ಈ ಜೋಡಿ 72ರನ್‌ಗಳ ಜೊತೆಯಾಟ ನೀಡಿದರು. ಉಳಿದಂತೆ ನಿತೀಶ್‌ ರೆಡ್ಡಿ 37(25) ರನ್‌, ಷಹಬಾಜ್‌ ಅಹ್ಮದ್‌ 3(6) ರನ್‌, ಕೊನೆಯಲ್ಲಿ ಅಬ್ಬರಿಸಿದ ಹೆನ್ರಿಚ್‌ ಕ್ಲಾಸೆನ್‌ 42(26) ರನ್‌ ಬಾರಿಸಿದರು.

ಕೊನೆಯಲ್ಲಿ ಔಟಾಗದೇ ಅಬ್ದುಲ್‌ ಸಮದ್‌ 11(8)ರನ್‌ ಮತು ಸನ್ವೀರ್‌ ಸಿಂಗ್‌ 2(3) ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಪಂಜಾಬ್‌ ಪರ ಹರ್ಷಲ್‌ ಪಟೇಲ್‌ ಹಾಗೂ ಹರ್ಷ್‌ದೀಪ್‌ ಸಿಂಗ್‌ ತಲಾ 2 ವಿಕೆಟ್‌, ಹರ್ಪ್ರೀತ್‌ ಬ್ರಾರ್‌ ಮತ್ತು ಶಶಾಂಕ್‌ ಸಿಂಗ್‌ ತಲಾ ಒಂದೊಂದು ವಿಕೆಟ್‌ ಪಡೆದರು.