Mysore
27
scattered clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

IPL 2024: ಸಿಎಸ್‌ಕೆ ನಾಯಕನಾಗಿ ಸೂತನ ದಾಖಲೆ ಬರೆದ ಋತುರಾಜ್‌!

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸಿಎಸ್‌ಕೆ ಮತ್ತು ಎಲ್ಎಸ್‌ಜಿ ನಡುವಿನ ಲೀಗ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಋತುರಾಜ್‌ ಗಾಯಕ್ವಾಡ್‌ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಹೌದು, ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಸಿಎಸ್‌ಕೆ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಇದರ ಹೊರತಾಗಿಯೂ ನಾಯಕ ಋತುರಾಜ್‌ ಗಾಯಕ್ವಾಡ್‌ ಭರ್ಜರಿಯಾಗಿ ಬ್ಯಾಟ್‌ ಬೀಸಿ ತಂಡಕ್ಕೆ ಬದ್ರ ಬುನಾದಿ ಹಾಕಿದರು.

ನಾಯಕ ಗಾಯಕ್ವಾಡ್‌ 56 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ ಅವರು ಸಿಎಸ್‌ಕೆ ಬಳಗದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದರು. ಅದೇನೆಂದರೇ, ಐಪಿಎಲ್‌ ಇತಿಹಾಸದಲ್ಲಿಯೇ ಸಿಎಸ್‌ಕೆ ಪರ ಶತಕ ದಾಖಲಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಕ್ಯಾಪ್ಟನ್‌ ಋತುರಾಜ ಭಾಜನರಾದರು.

ಮಾಜಿ ಕಪ್ತಾನ್‌ ಎಂ.ಎಸ್‌ ಧೋನಿ ಅವರು ಐಪಿಎಲ್‌ನಲ್ಲಿ 84ರನ್‌ ಗಳಿಸಿದ್ದೇ ಸಿಎಸ್‌ಕೆ ನಾಯಕನ ಈವರೆಗಿನ ಗರಿಷ್ಠ ಮೊತ್ತವಾಗಿತ್ತು. ಋತುರಾಜ್‌ ಶತಕ ಬಾರಿಸುವ ಮೂಲಕ 16 ವರ್ಷಗಳ ಕ್ಯಾಪ್ಟನ್‌ ಸೆಂಚುರಿ ಬರವನ್ನು ಋತುರಾಜ್‌ ನೀಗಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಸಿಎಸ್‌ಕೆ ನೀಡಿದ 210ರನ್‌ಗಳ ಗುರಿಯನ್ನು ಸಾರಾಗವಾಗಿ ಬೆನ್ನಟ್ಟಿದ ಎಲ್‌ಎಸ್‌ಜಿ, ಮಾರ್ಕಸ್‌ ಸ್ಟೋಯ್ನಿಸ್‌ ಶತಕದ ನೆರವಿನಿಂದ 19.3 ಓವರ್‌ಗಳಲ್ಲಿಯೇ 213 ಬಾರಿಸಿ ಗೆಲುವಿನ ನಗೆ ಬೀರಿತು.

Tags: