Mysore
23
overcast clouds
Light
Dark

IPL 2024: ಆರ್‌ಸಿಬಿ ಡ್ರೆಸ್ಸಿಂಗ್‌ ರೂಂನಲ್ಲಿ ಎಂಎಸ್‌ಡಿ ದರ್ಶನ: ಯಾಕೆ ಗೊತ್ತಾ?

ಬೆಂಗಳೂರು: ಇದೇ ಶನಿವಾರ(ಮೇ.18) ರಂದು ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಹೈವೋಲ್ಟೇಜ್‌ ಕದನಕ್ಕೆ ವೇದಿಕೆ ಸಜ್ಜಾಗಿದೆ.

ಇತ್ತಂಡಗಳು ಪ್ಲೇಆಫ್‌ ತಲುಪಲು ನಿರ್ಣಯದ ಪಂದ್ಯ ಇದಾಗಿದ್ದು, ಗೆದ್ದ ತಂಡ ಪ್ಲೇ ಆಫ್‌ ತಲುಪಿದರೇ, ಸೋತ ತಂಡ ಈ ಆವೃತ್ತಿಯಿಂದ ಹೊರ ಬೀಳಲಿದೆ. ಈ ಸೀಸನ್‌ ನ ಎಲ್ಲಾ ಪಂದ್ಯಗಳಿಗಿಂತ ಈ ಪಂದ್ಯ ಅತಿಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡ ಪಂದ್ಯವಾಗಿದೆ.

ಭಾರತೀಯ ಕ್ರಿಕೆಟ್‌ ಕಂಡ ಅತ್ಯುತ್ತಮ ಆಟಗಾರರಾದ ಎಂ.ಎಸ್‌ ಧೋನಿ ಹಾಗೂ ವಿರಾಟ್‌ ಕೊಹ್ಲಿ ಅವರು ಈ ಪಂದ್ಯದ ಪ್ರಮುಖ ಆಕರ್ಷಣೆಗಾಗಿದ್ದಾರೆ. ಈ ಇಬ್ಬರು ಆಟಗಾರರನ್ನು ಎದುರಾಳಿಗಳನ್ನಾಗಿ ನೋಡುವುದು ಇದೇ ಕೊನೆಯ ಬಾರಿ ಎಂದು ಫ್ಯಾನ್ಸ್‌ ಎಲ್ಲರೂ ಭಾವಿಸಿದ್ದು ಈ ಪಂದ್ಯ ಹೆಚ್ಚಿನ ಮನ್ನಣೆ ಪಡೆದುಕೊಂಡಿದೆ.

ಇನ್ನು ಈ ಪಂದ್ಯ ಆರ್‌ಸಿಬಿ ತವರಿನಂಗಳದಲ್ಲಿ ನಡೆಯಲಿದ್ದು, ನಿನ್ನೆ ಸಿಎಸ್‌ಕೆ ಪಾಳಯ ಚಿನ್ನಸ್ವಾಮಿಗೆ ಬಂದಿಳಿದಿದೆ. ಪಂದ್ಯ ಆರಂಭಕ್ಕೂ ಮುನ್ನಾ ಸಿಎಸ್‌ಕೆ ಮಾಜಿ ಕಪ್ತಾನ್‌ ಎಂ.ಎಸ್‌ ಧೋನಿ ಆರ್‌ಸಿಬಿ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಎಂಎಸ್‌ಡಿ, ಆರ್‌ಸಿಬಿ ಡ್ರೆಸ್ಸಿಂಗ್‌ ರೂಂನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಚಹಾ ಕುಡಿಯಲು. ಧೋನಿ ಅವರಿಗೆ ಚಹಾ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿರುವ ವಿಷಯ. ಅದರಂತೆ ಅವರ ಸರಳತೆಯೂ ಎಲ್ಲರನ್ನು ಆಗಾಗ್ಗೆ ಗೆಲ್ಲುವುದಂತು ನಿಜ. ಆರ್‌ಸಿಬಿ ಡ್ರೆಸ್ಸಿಂಗ್‌ ರೂಂಗೆ ತೆರಳಿ ಅಲ್ಲಿನ ಸಿಬ್ಬಂದಿಗಳಿಂದ ಚಹಾ ಪಡೆದು ಧನ್ಯವಾದ ಹೇಳಿ ಧೋನಿ ವಾಪಸಾಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಈ ವಿಡಿಯೋವನ್ನು ಆರ್‌ಸಿಬಿ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ಬೆಂಗಳೂರಿಗೆ ನಿಮಗೆ ಸ್ವಾಗತ ಮಹಿ ಭಯ್‌ ಎಂದು ಟ್ಯಾಗ್‌ ಲೈನ್‌ ನೀಡಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ಸಖತ್‌ ಖುಷ್‌ ಆಗಿದ್ದಾರೆ. ಇನ್ನು ವಿಕೆ-ಎಂಎಸ್‌ಡಿ ಅವರನ್ನು ಕೊನೆಯ ಬಾರಿ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.