Mysore
28
scattered clouds

Social Media

ಸೋಮವಾರ, 17 ನವೆಂಬರ್ 2025
Light
Dark

IPL 2024: ಸ್ಟೋಯ್ನಿಸ್‌ ಶತಕ: ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಎಲ್‌ಎಸ್‌ಜಿ

ಚೆನ್ನೈ: ಆಸ್ಟ್ರೇಲಿಯನ್‌ ಸ್ಟಾರ್‌ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಅವರ ಶತಕದ ನೆರವಿನಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡವು 6 ವಿಕೆಟ್‌ಗಳ ಅಂತರದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿದೆ.

ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಸಿಎಸ್‌ಕೆ ಮತ್ತು ಎಲ್‌ಎಸ್‌ಜಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ, ನಾಯಕ ಋತುರಾಜ್‌ ಅವರ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 210ರನ್‌ ಕಲೆಹಾಕಿ, ಎಲ್‌ಎಸ್‌ಜಿಗೆ 211ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿತ್ತು. ಈ ಮೊತ್ತವನ್ನು ಚೇಸ್‌ ಮಾಡಿದ ಲಖನೌ 19.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 213 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಸಿಎಸ್‌ಕೆ ಇನ್ನಿಂಗ್ಸ್‌: ತವರಿನಂಗಳದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಸಿಎಸ್‌ಕೆ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಈ ಸೀಸನ್‌ನಲ್ಲಿ ತೀರಾ ಕಳಪೆ ಫಾರ್ಮ್‌ನಲ್ಲಿರುವ ರಹಾನೆ ಈ ಪಂದ್ಯದಲ್ಲಿಯೂ ನಿರೀಕ್ಷಿತ ಆಟ ಆಡಲಿಲ್ಲ. ಕೇವಲ ಒಂದು ರನ್‌ಗಳಿಸಿ ಹೆನ್ರಿಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಬಳಿಕ ಬಂದ ಮಿಚೆಲ್‌ 11ಕ್ಕೆ ಸುಸ್ತಾದರು. ಜಡೇಜಾ 16 ರನ್‌ ಬಾರಿಸಿ ಪೆವಿಲಿಯನ್‌ ಸೇರಿದರು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರು, ಮತ್ತೊಂದು ಕಡೆ ಜವಾಬ್ದಾರಿಯಿಂದ ಬ್ಯಾಟ್‌ ಬೀಸಿದ ನಾಯಕ ಋತುರಾಜ್‌ ಗಾಯಕ್ವಾಡ್‌ ಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಇಪ್ಪತ್ತು ಓವರ್‌ಗಳನ್ನು ಆಡಿದ ಅವರು ಔಟಾಗದೇ 60 ಎಸೆತಗಳಲ್ಲಿ 12 ಬೌಂಡರಿ ಹಾಗೂ 3ಸಿಕ್ಸರ್‌ ಸಹಿತ 108 ರನ್‌ ಬಾರಿಸಿದರು. ಶಿವಂ ದುಬೆ 66 (27ಎ, 3*4 7*6) ರನ್‌ ಕೆಲಹಾಕಿ ನಾಯಕನಿಗೆ ಸಾಥ್‌ ನೀಡಿದರು. ಉಳಿದಂತೆ ಧೋನಿ 4(1) ರನ್‌ ಬಾರಿಸಿದರು.

ಲಖನೌ ಪರ ಹೆನ್ರಿ, ಯಶ್‌ ಠಾಕೂರ್‌ ಹಾಗೂ ಮೌಸಿನ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಎಲ್‌ಎಸ್‌ಜಿ ಇನ್ನಿಂಗ್ಸ್‌: ಸಿಎಸ್‌ಕೆ ನೀಡಿದ ಬೃಹತ್‌ ಮೊತ್ತ ಬೆನ್ನತ್ತಿದ ಎಲ್‌ಎಸ್‌ಜಿ ಆರಂಭದಲ್ಲಿ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ವಿಫಲವಾಯಿತು. ಡಿ ಕಾಕ್‌ ಶೂನ್ಯ ಸಂಪಾದಿಸಿ ಹೊರ ನಡೆದರು. ನಾಯಕ ಕೆ.ಎಲ್‌ ರಾಹುಲ್‌ 16 ರನ್‌ ಬಾರಿಸಿ ಹೊರ ನಡೆದರು. ಉಳಿದಂತೆ ಕನ್ನಡಿಗ ಪಡಿಕ್ಕಲ್‌ 13, ನಿಕೋಲಸ್‌ ಪೂರನ್‌ 34 ರನ್‌ ಬಾರಿಸಿ ಬೇಗನೇ ನಿರ್ಗಮಿಸಿದರು.

ನಿಧಾನಗತಿಯಿಂದಲೇ ಇನ್ನಿಂಗ್ಸ್‌ ಕಟ್ಟಿದ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಚೆನ್ನೈ ಬೌಲರ್ಸ್‌ಗಳ ಬೆವರಿಳಿಸಿದರು. ಚೆಪಾಕ್‌ ಮೂಲ ಮೂಲೆಗೂ ಸಿಕ್ಸರ್‌, ಫೊರ್ಸ್‌ ಚಚ್ಚಿದ ಸ್ಟೋಯ್ನಿಸ್‌ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ಅವರು ಔಟಾಗದೇ 63 ಎಸೆತಗಳಲ್ಲಿ 13 ಬೌಂಡರಿ ಮತ್ತು 6 ಸಿಕ್ಸರ್‌ ಸಹಿತ 124 ರನ್‌ ಬಾರಿಸಿದರು. ದೀಪಕ್‌ ಹೂಡಾ 17* ರನ್‌ ಬಾರಿಸಿ ತಂಡದ ಗೆಲುವಿಗೆ ಸಹಕರಿಸಿದರು.

ಸಿಎಸ್‌ಕೆ ಪರ ಪತಿರಣ 2, ಮುಸ್ತಫಿಜುರ್‌ ಹಾಗೂ ದೀಪಕ್‌ ಚಾಹರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ: ಮಾರ್ಕಸ್‌ ಸ್ಟೋಯ್ನಿಸ್‌

Tags:
error: Content is protected !!