Mysore
27
scattered clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

IPL 2024: ಪಂಜಾಬ್‌ ವಿರುದ್ಧ ಸಿಎಸ್‌ಕೆಗೆ ಸುಲಭ ಗೆಲುವು

ಧರ್ಮಾಶಾಲಾ: ರವೀಂದ್ರ ಜಡೇಜಾ ಆಲ್‌ರೌಂಡರ್‌ ಆಟದ ಫಲವಾಗಿ ಚೆನ್ನೈಸೂಪರ್‌ ಕಿಂಗ್ಸ್‌ ತಂಡಕ್ಕೆ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸುಲಭದ ಗೆಲುವು ದಕ್ಕಿದೆ. ಆ ಮೂಲಕ ಕಳೆದ ಮೂರು ಸೀಸನ್‌ಗಳ ಬಳಿಕ ಪಂಜಾಬ್‌ ವಿರುದ್ಧ ಸಿಎಸ್‌ಕೆ ಮೊದಲ ಗೆಲುವು ದಾಖಲಿಸಿದೆ.

ಇಲ್ಲಿನ ಹಿಮಾಚಲ ಪ್ರದೇಶ ಮೈದಾನದಲ್ಲಿ ನಡೆದ ಐಪಿಎಲ್‌ ಸೀಸನ್‌ 53ನೇ ಪಂದ್ಯದಲ್ಲಿ ಸಿಎಸ್‌ಕೆ ಹಾಗೂ ಪಿಬಿಎಸ್‌ಕೆ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 167ರನ್‌ ಗಳಿಸಿ 168 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಪಂಜಾಬ್‌ 20ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 139ರನ್‌ ಗಳಿಸಿ 28 ರನ್‌ಗಳ ಅಂತರದಿಂದ ಸೋಲನುಭವಿಸಿತು.

ಚೆನ್ನೈ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈಗೆ ರಹಾನೆ ಮತ್ತೊಮ್ಮೆ ನೀರಸ ಪ್ರದರ್ಶನ ನೀಡಿದರು. ರಹಾನೆ 9(7) ಬೇಗನೇ ವಿಕೆಟ್‌ ಒಪ್ಪಿಸಿ ಹೊರನಡೆದರು. ಬಳಿಕ ಜತೆಯಾದ ಋತುರಾಜ್‌ ಗಾಯಕ್ವಾಡ್‌ 32(21) ಹಾಗೂ ಡೆರೆಲ್‌ ಮಿಚೆಲ್‌ 30(19) ಚೇತರಿಕೆ ಆಟವಾಡಿದರು. ಶಿವಂ ದುಬೆ ಶೂನ್ಯಕ್ಕೆ ಔಟಾದರೇ, ಮೋಯಿನ್‌ ಅಲಿ 17(20) ರನ್‌ ಬಾರಿಸಿದರು. ತಂಡ ಸಂಕಷ್ಟದ ಸಮಯದಲ್ಲಿದ್ದಾಗ ಬಂದು ಜಾಣ್ಮೆಯಿಂದ ಬ್ಯಾಟ್‌ ಬೀಸಿದ ಆಲ್‌ರೌಂಡರ್‌ ಜಡೇಜಾ 26ಎಸೆತ 3ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 43 ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ಸ್ಯಾಂಟ್ನರ್‌ 11(11), ಠಾಕೂರ್‌ 17(11), ಧೋನಿ ಶೂನ್ಯ ಸಂಪಾದಿಸಿದರು. ಗ್ಲೇಸನ್‌ 2(2) ರನ್‌ ಕಲೆಹಾಕಿದರು.

ಪಂಜಾಬ್‌ ಪರ ರಾಹುಲ್‌ ಚಾಹರ್‌ ಹಾಗೂ ಹರ್ಷಲ್‌ ಪಟೇಲ್‌ ತಲಾ 3, ಅರ್ಷದೀಪ್‌ ಸಿಂಗ್‌ 2 ಹಾಗೂ ಕರನ್‌ ಒಂದು ವಿಕೆಟ್‌ ಪಡೆದು ಮಿಂಚಿದರು.

ಪಂಜಾಬ್‌ ಇನ್ನಿಂಗ್ಸ್‌: ತನ್ನ ತವರಿನಂಗಳದಲ್ಲಿ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಪಂಜಾಬ್‌ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಜಾನಿ ಬೇರ್‌ಸ್ಟೋ 7(6), ರೂಸೋ ಶೂನ್ಯಕ್ಕೆ ಔಟಾದರು. ಪ್ರಬ್‌ಸಿಮ್ರಾನ್‌ 30(23) ಹಾಗೂ ಶಶಾಂಕ್‌ ಸಿಂಗ್‌ 27(20) ರನ್‌ ಬಾರಿಸಿ ಔಟಾದರು. ಬಳಿಕ ಬಂದ ಬೇರಾರಿಂದಲೂ ಗೆಲುವಿನ ಆಟ ಕಂಡು ಬರಲಿಲ್ಲ. ನಾಯಕ ಕರನ್‌ 7(11), ಜಿತೇಶ್‌ ಶರ್ಮಾ ಶೂನ್ಯ, ಅಶುತೋಷ್‌ ಶರ್ಮಾ 3(10), ಹರ್ಪ್ರೀತ್‌ ಬ್ರಾರ್‌ 17(13), ಹರ್ಷಲ್‌ ಪಟೇಲ್‌ 12(13), ರಾಹುಲ್‌ ಚಾಹರ್ 16(10) ಹಾಗೂ ರಬಾಡ 11(10) ರನ್‌ ಬಾರಿಸಿಯೂ ಕಡಿಮೆ ಮೊತ್ತ ಬೆನ್ನತ್ತುವಲ್ಲಿ ಪಂಜಾಬ್‌ ವಿಫಲವಾಯಿತು.

ಸಿಎಸ್‌ಕೆ ಪರ ಜಡೇಜಾ 3, ಸಮರ್‌ಜಿತ್‌ ಸಿಂಗ್‌ ಹಾಗೂ ತಷಾರ್‌ ದೇಶ್‌ಪಾಂಡೆ ತಲಾ 2, ಮಿಚೆಲ್‌ ಸ್ಯಾಂಟ್ನರ್‌ ಹಾಗೂ ಶಾರ್ದುಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್ ಪಡೆದು ಗಮನಸೆಳೆದರು.

ಪಂದ್ಯ ಶ್ರೇಷ್ಠ: ರವೀಂದ್ರ ಜಡೇಜಾ

Tags: