ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) 2024ನೇ ಸಾಲಿನ ವರ್ಷದ ಪುರುಷರ ಟಿ20 ಪ್ರಶಸ್ತಿಗೆ ಟೀಂ ಇಂಡಿಯಾದ ಎಡಗೈ ಬೌಲರ್ ಅರ್ಷದೀಪ್ ಸಿಂಗ್ ಭಾಜನರಾಗಿದ್ದಾರೆ.
25 ವರ್ಷದ ಅರ್ಷದೀಪ್, ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ಸಾಲಿನಲ್ಲಿ 18 ಪಂದ್ಯಗಳಲ್ಲಿ ಒಟ್ಟು 36 ವಿಕೆಟ್‌ಗಳನ್ನು ಗಳಿಸಿದ್ದರು. ಈ ಪೈಕಿ ಟಿ20 ವಿಶ್ವಕಪ್‌ನಲ್ಲಿ 8 ಪಂದ್ಯಗಳಿಂದ 17 ವಿಕೆಟ್‌ಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದರು.
ಐಸಿಸಿ ಪುರುಷರ ಟಿ20 ಕ್ರಿಕೆಟ್ ತಂಡದಲ್ಲೂ ಸ್ಥಾನ ಪಡೆದಿರುವ ಅರ್ಷದೀಪ್, ಪಾಕಿಸ್ತಾನದ ಬಾಬರ್ ಅಜಂ ಹಾಗೂ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.