Mysore
24
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಭಾರತ-ವೆಸ್ಟ್‌ ಇಂಡೀಸ್‌ ಸರಣಿ: ಟೀಂ ಇಂಡಿಯಾ ವಿರುದ್ಧ ಕಿಡಿಕಾರಿದ ಗಾವಸ್ಕರ್

ಲಂಡನ್: ಭಾರತ ಟೆಸ್ಟ್ ತಂಡವು ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸೋಲನುಭವಿಸಿದೆ. ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಸೋತ ರೋಹಿತ್ ಪಡೆ ಮತ್ತೆ ಟ್ರೋಫಿಯಿಂದ ವಂಚಿತವಾಯಿತು.

ಪಂದ್ಯದ ಪ್ರದರ್ಶನದ ಬಗ್ಗೆ ಮಾಜಿ ಆಟಗಾರ ಸುನಿಲ್ ಗಾವಸ್ಕರ್ ಅವರು ಕಿಡಿಕಾರಿದ್ದಾರೆ. ಅವರು ತಂಡದ ಕಾರ್ಯ ವಿಧಾನವನ್ನು ಪ್ರಶ್ನಿಸಿದ್ದು, ಪಂದ್ಯದ ಸಮಯದಲ್ಲಿ ತಪ್ಪಾದ ಎಲ್ಲಾ ಅಂಶಗಳ ಮೇಲೆ ಇಡೀ ತಂಡವು ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದಂತಹ ದೊಡ್ಡ ತಂಡಗಳ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ತಪ್ಪುಗಳನ್ನು ಪುನರಾವರ್ತಿಸುವುದನ್ನು ಮುಂದುವರಿಸಿದರೆ ವೆಸ್ಟ್ ಇಂಡೀಸ್‌ನಂತಹ ತಂಡಗಳ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಗೆಲುವು ಸಾಧಿಸಿಯೂ ಏನೂ ಅರ್ಥವಿಲ್ಲ ಎಂದು ಗಾವಸ್ಕರ್ ಹೇಳಿದರು.

“ಹೌದು ವೆಸ್ಟ್ ಇಂಡೀಸ್ ವಿರುದ್ಧ ನಾವು ಎರಡು ಪಂದ್ಯಗಳನ್ನು ಆಡಲಿದ್ದೇವೆ. ಆದರೆ ವೆಸ್ಟ್ ಇಂಡೀಸ್ ವಿಶ್ವದ ಅತ್ಯುತ್ತಮ ತಂಡವಲ್ಲ. ನೀವು ಹೋಗಿ ಅವರನ್ನು 2-0, 3-0 ಅಂತರದಿಂದ ಗೆದ್ದರೂ ಪ್ರಯೋಜನವಿಲ್ಲ. ಏಕೆಂದರೆ ನೀವು ಫೈನಲ್‌ ಗೆ ಹೋದರೆ ನೀವು ಮತ್ತೆ ಆಸ್ಟ್ರೇಲಿಯಾದಂತಹ ತಂಡವನ್ನು ಎದುರಿಸಬೇಕು. ಆದರೆ ಅದೇ ತಪ್ಪುಗಳನ್ನು ಮಾಡುತ್ತಿದ್ದರೆ, ನೀವು ಟ್ರೋಫಿಯನ್ನು ಹೇಗೆ ಗೆಲ್ಲುತ್ತೀರಿ?” ಎಂದು ಗಾವಸ್ಕರ್ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!