Mysore
21
overcast clouds
Light
Dark

Paris Olympics 2024: ಹಾಕಿಯಲ್ಲಿ ಕಂಚು ಗೆದ್ದ ಭಾರತ

ಪ್ಯಾರಿಸ್‌: ಪ್ಯಾರಿಸ್‌ ಒಲಂಪಿಕ್ಸ್‌ನ ಹಾಕಿ ಪಂದ್ಯಾವಳಿಯಲ್ಲಿ ಕಂಚಿನ ಪದಕ್ಕಾಗಿ ನಡೆದ ಕಾದಾಟದಲ್ಲಿ ಭಾರತದ ಹಾಕಿ ತಂಡ ಸ್ಪೇನ್‌ ತಂಡವನ್ನು ಮಣಿಸುವ ಮೂಲಕ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಕಳೆದ ಒಲಂಪಿಕ್ಸ್‌ನಲ್ಲಿಯೂ ಕಂಚಿನ ಪದಕ ಗೆದ್ದಿದ್ದ ಭಾರತ ತಂಡ ಈ ಬಾರಿ ಚಿನ್ನ ಗೆಲ್ಲುಚ ನೆಚ್ಚಿನ ತಂಡ ಎಂಬ ನರೀಕ್ಷೆ ಹುಟ್ಟುಹಾಕಿದ್ದರು.

ಆದರೆ ಜರ್ಮನ್‌ ವಿರುದ್ಧ ಸೋತು ಕಂಚಿನ ಪದಕಕ್ಕಾಗಿ ಸ್ಪೇನ್‌ ವಿರುದ್ಧ ಕಣಕ್ಕಿಳಿಯಬೇಕಾಯಿತು. ಇನ್ನು ಇಂದು (ಗುರುವಾರ, ಆ.8)ನಡೆದ ಭಾರತ ಹಾಗೂ ಸ್ಪೇನ್‌ ನಡುವಿನ ಕಂಚಿನ ಪದಕ ಪಂದ್ಯದಲ್ಲಿ ಭಾರತ ತಂಡ 2-1 ಅಂತರದಿಂದ ಗೆಲುವು ದಾಖಲಿಸುವ ಮೂಲಕ ಮತ್ತೊಮ್ಮೆ ಕಂಚಿಗೆ ಕೊರಳೊಡ್ಡಿದೆ.

ಪಂದ್ಯದ ಆರಂಭದಿಂದಲೂ ತಮ್ಮ ಹಿಡಿತದಲ್ಲಿಯೇ ಮುನ್ನಡೆ ಸಾಧಿಸುತ್ತಿದ್ದ ಭಾರತ ತಂಡ ಸ್ಪೇನ್‌ ಕಟ್ಟಿಹಾಕುವಲ್ಲಿ ಸಫಲವಾಯಿತು. ಭಾರತ ತಂಡದ ಪರವಾಗಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಅವರು ಎರಡು ಗೋಲು ಗಳಿಸಿದರು. ಇನ್ನು ಸ್ಪೇನ್‌ ಒಡ್ಡಿದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಭಾರತ ತಂಡದ ಗೋಲ್‌ ಕೀಪರ್‌ ಶ್ರೀಜೇಶ್‌ ಅವರು ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.