Mysore
22
overcast clouds
Light
Dark

t20 worldcup 2024: ವಿಶ್ವಕಪ್‌ ಕಾಳಗದಲ್ಲಿ ಪಾಕ್‌ ವಿರುದ್ಧ ಭಾರತದ್ದೇ ಮೇಲುಗೈ

ನ್ಯೂಯಾರ್ಕ್‌: ಇಂದು t20 worldcup 2024ರ ಗ್ರೂಪ್‌ ʼಎʼ ಲೀಗ್‌ ಪಂದ್ಯದಲ್ಲಿ ಏಷ್ಯಾಖಂಡದ ಬದ್ಧ ವೈರಿಗಳ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಹೌದು. ಇದು ಟೀಂ ಇಂಡಿಯಾ ಹಾಗೂ ಪಾಕಿಸ್ತಾನ್‌ ನಡುವಿನ ವಿಶ್ವಕಪ್‌ ಟಿ20 ಪಂದ್ಯಾವಳಿಯಾಗಿದೆ.

ಇಲ್ಲಿನ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ಇಂದು ರಾತ್ರಿ 8 ಗಂಟೆಗೆ ಭಾರತ ಹಾಗೂ ಪಾಕಿಸ್ತಾನ ಕಾದಾಟ ನಡೆಸಲಿದೆ. ಈ ಪಂದ್ಯ ಉಭಯ ತಂಡಗಳಿಗೆ ಅತೀ ಪ್ರಮುಖ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡಗಳು ಗ್ರೂಪ್‌ನಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಳ್ಳಲು ಸಹಕಾರಿಯಾಗಲಿದೆ.

ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳ ಟಿ20 ಮುಖಾಮುಖಿ ಪಂದ್ಯಗಳ ವಿಚಾರಕ್ಕೆ ಬಂದರೆ ಭಾರತ ಪಾಕ್‌ ವಿರುದ್ಧ ಪ್ರಾಬಲ್ಯ ಮೆರೆದಿದೆ. ಇತ್ತಂಡಗಳು ಈವರೆಗೆ ಟಿ20 ಮಾದರಿಯಲ್ಲಿ 12 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಬರೊಬ್ಬರಿ 9 ಬಾರಿ ಟೀಂ ಇಂಡಿಯಾ ಗೆದ್ದು ಬೀಗಿದರೇ ಪಾಕ್‌ ಕೇಲವ ಮೂರು ಬಾರಿ ಮಾತ್ರ ಗೆದ್ದಿದೆ.

ಇನ್ನು ವಿಶ್ವಕಪ್‌ ಟಿ20 ಪಂದ್ಯಗಳ ಕಾದಾಟದ ಬಗ್ಗೆ ಹೇಳುವುದಾದರೇ ಈವರೆಗೆ ಒಟ್ಟು ಏಳು ಪಂದ್ಯಗಳಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದು, ಇದರಲ್ಲಿ ಟೀಂ ಇಂಡಿಯಾ 6 ಪಂದ್ಯಗಳಲ್ಲಿ ಗೆದ್ದರೆ ಪಾಕ್‌ ಕೇವಲ 1 ಪಂದ್ಯ ಮಾತ್ರ ಗೆದ್ದಿದೆ.

ಪಂದ್ಯದ ವಿವರ: ಇಂಡಿಯಾ / ಪಾಕಿಸ್ತಾನ ನಡುವಿನ ಪಂದ್ಯ ಇಂದು (ಜೂನ್‌.9) ರಾತ್ರಿ 8 ಗಂಟೆಗೆ(ಭಾರತೀಯ ಕಾಲಮಾ) ಪಂದ್ಯ ನಡೆಯುತ್ತದೆ. ಆದರೆ ಅಮೇರಿಕಾ ಕಾಲಮಾನದಲ್ಲಿ ಈ ಪಂದ್ಯ ಬೆಳಿಗ್ಗೆ 10.30ಕ್ಕೆ ಆರಂಭವಾಗುತ್ತದೆ.

ಪಂದ್ಯ ವಿಕ್ಷಣೆ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್ವರ್ಕ್‌, ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ನೆಟ್ವರ್ಕ್‌ ಸೇರಿದಂತೆ ಎಲ್ಲಾ ಸ್ಪೋರ್ಟ್ಸ್‌ ನೆಟ್ವರ್ಕ್‌ಗಳಲ್ಲಿಯೂ ಪಂದ್ಯ ವೀಕ್ಷಿಸಬಹುದಾಗಿದೆ.

ಸ್ಟ್ರೀಮಿಂಗ್‌: ಈ ಪಂದ್ಯವನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ವೆಬ್‌ ಸೈಟ್‌ ಹಾಗೂ ಅಪ್ಲಿಕೇಷನ್‌ನಲ್ಲಿ ಉಚಿತವಾಗಿ ಪಂದ್ಯ ವೀಕ್ಷಿಸಬಹುದಾಗಿದೆ.

ಉಭಯ ತಂಡಗಳ ಆಟಗಾರರ ಮಾಹಿತಿ:

ಟೀಂ ಇಂಡಿಯಾ: ರೋಹಿತ್‌ ಶರ್ಮಾ (ನಾಯಕ), ಹಾರ್ದಿಕ್‌ ಪಾಂಡ್ಯ (ಉಪನಾಯಕ) ವಿರಾಟ್‌ ಕೊಹ್ಲಿ, ಯಶಸ್ವಿ ಜೈಸ್ವಾಲ್‌, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌ (ವಿ.ಕೀ), ಶಿವಂ ದುಬೆ, ರಿಷಭ್‌ ಪಂತ್‌ (ವಿ.ಕೀ), ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಅರ್ಶ್‌ದೀಪ್‌ ಸಿಂಗ್‌, ಕಲ್ದೀಪ್‌ ಯಾದವ್‌, ಯಜುವೇಂದರ್‌ ಚಾಹಲ್‌, ಮೊಹಮದ್‌ ಸಿರಾಜ್‌, ಜಸ್‌ಪ್ರಿತ್‌ ಬುಮ್ರಾ,

ಬೆಂಚ್‌; ಶುಭ್ಮನ್‌ ಗಿಲ್‌, ಆವೇಶ್‌ ಖಾನ್‌, ರಿಂಕು ಸಿಂಗ್‌, ಖಲೀಲ್‌ ಅಹ್ಮದ್‌.

ಪಾಕಿಸ್ತಾನ ತಂಡ: ಬಾಬರ್‌ ಅಜಂ (ನಾಯಕ), ಮೊಹಮದ್‌ ರಿಜ್ವಾನ್‌ (ವಿ.ಕೀ), ಅಬ್ರಾರ್‌ ಅಹ್ಮದ್‌, ಅಝಂ ಖಾನ್‌, ಫಖರ್‌ ಜಮಾನ್‌, ಹ್ಯಾರಿಸ್‌ ರೌಫ್‌, ಇಫ್ತಿಕರ್‌ ಅಹ್ಮದ್‌, ಇಮಾದ್‌ ವಾಸಿಂ, ಅಬ್ಬಾಸ್‌ ಅಫ್ರಿದಿ, ನಸೀಮ್‌ ಸಾ, ಸೈಮ್‌ ಆಯೂಬ್‌, ಶದಾಬ್‌ ಖಾನ್‌, ಶಾಹೀನ್‌ ಶಾ ಅಫ್ರಿದಿ, ಉಸ್ಮಾನ್‌ ಖಾನ್‌, ಮೊಹಮದ್‌ ಅಮೀರ್‌.